ರೆಡ್ ಕ್ಲಾಸ್ ನಿಂದ ತಾಡಪತ್ರಿ ವಿತರಣೆ

IMG-20230822-WA0014.jpg
Published on

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಭಾರಿ ಮಳೆ ಸಂದರ್ಭದಲ್ಲಿ ಮನೆ ಕಳೆದುಕೊಂಡ ಬಡವರಿಗೆ ಫ್ಲಡ್ ರಿಲೀಫ್ ಕಿಟ್ ಗಳನ್ನು ವಿತರಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ನೆಮ್ಮದಿಯ ಬದುಕಿಗೆ ನೆರವಾಯಿತು.

ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಮಂಗಳವಾರ ಜರುಗಿದ ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಮಾರಂಭದಲ್ಲಿ ಕಿಟ್ ಗಳನ್ನು ಲಾನುಭವಿಗಳಿಗೆ ವಿತರಿಸಲಾಯಿತು.

ತಾಡಪತ್ರಿ ಹಾಗೂ ಟೆಂಡ್ ಹಾಕಿಕೊಳ್ಳಲು ಕೆಲ ಸಾಮಗ್ರಿಗಳಿರುವ ಕಿಟ್ ನೀಡಲಾಯಿತು.

ಸಂಸ್ಥೆಯ ಡಾ. ಮಹಾಂತೇಶ ವೀರಾಪುರ ಮಾತನಾಡಿ, ಅಗತ್ಯ ಇರುವ ಜನರಿಗೆ ಕಿಟ್ ನೀಡಿ ಸಹಾಯ ಮಾಡಿದ ತೃಪ್ತಿ ಇದೆ ಎಂದರು.

ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಕ್ಯಾನ್ಸರ್ ಜಾಗೃತಿ ಶಿಬಿರಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net