

ವಿಜಯವಾಣಿ ಸುದ್ದಿಜಾಲ ಉಡುಪಿ
ಮಾನವೀಯ ನೆಲೆಯಲ್ಲಿ ಜನಸೇವೆ ಮಾಡುವುದು ರೆಡ್ ಕ್ರಾಸ್ನ ಮುಖ್ಯ ಉದ್ದೇಶವಾಗಿದೆ. ಶಾಂತಿ, ಸ್ವಾತಂತ್ರ್ಯ ಮತ್ತು ಐಕ್ಯತೆ ರೆಡ್ ಕ್ರಾಸ್ನ ಮೂಲ ತತ್ತ್ವಗಳಾಗಿವೆ. ಅದನ್ನು ಅರ್ಥಮಾಡಿಕೊಂಡು ಸ್ವಯಂ ಸೇವಕರು ರೆಡ್ ಕ್ರಾಸ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಉಡುಪಿಯ ಡಾ. ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ನಿಕೇತನಾ ಸಲಹೆ ನೀಡಿದರು.
ನೀಲಾವರದಲ್ಲಿರುವ ಗೋವರ್ಧನ ಗೋಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್ನ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ಮಾತನಾಡಿ, ಸಹಬಾಳ್ವೆ, ಮಾನವೀಯತೆ ಹಾಗೂ ಸೇವೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಬಿ.ಪಿ. ವರದರಾಯ್ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಕೆ.ಬೇಬಿ, ಗೀತಾ ಬಾಳಿಗ, ಡಾ. ಮಲ್ಲಿಕಾ ಎ. ಶೆಟ್ಟಿ, ರೆಡ್ ಕ್ರಾಸ್ನ ಯೋಜನಾಧಿಕಾರಿ ದೀಪಿಕಾ ಉಪಸ್ಥಿತರಿದ್ದರು.
ಪ್ರಜ್ಞಾ ಸ್ವಾಗತಿಸಿದರು. ಪುಣ್ಯಾ ವಂದಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು.