ತುಳಸಿಗೇರೆಪ್ಪನ ಭಕ್ತರಿಗೆ ಕೆಂಪು ಹಾಸು

Red bed for Tulsi Gerappa devotees
Red bed for Tulsi Gerappa devotees
Published on

ಕಲಾದಗಿ: ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತುಳಸಿಗೇರಿಯ ಹನುಮಂತದೇವರ ದೇವಸ್ಥಾನದ ಪ್ರದಕ್ಷೀಣಾ ಪಥದಲ್ಲಿ ಭಕ್ತರ ಪಾದ ಬಿರು ಬಿಸಲಿಗೆ ಸುಡದಿರಲಿ ಎಂದು ಕಾರ್ಪೆಟ್ ಹಾಕಲಾಯಿತು.

ಈ ಕುರಿತು ಬುಧವಾರದ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ನೆಲಹಾಸು, ಬಿಳಿಬಣ್ಣದ ಪಟ್ಟಿ, ನೆರಳಿನ ವ್ಯವಸ್ಥೆ ಇಲ್ಲದ್ದರಿಂದ ಪ್ರದಕ್ಷಿಣೆ ಹಾಕುವಾಗ ಭಕ್ತರು ಪಡುತ್ತಿರುವ ಪಾಡವನ್ನು ವಿವರಿಸಿ ‘ತುಳಸಿಗೇರೆಪ್ಪನ ಭಕ್ತರು ಹೈರಾಣು’ ಎಂಬ ತಲೆಬರಹದೊಂದಿಗೆ ವರದಿ ಪ್ರಕಟವಾಗುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತು.

ಬಾಗಲಕೋಟ ತಹಸೀಲ್ದಾರ್ ಕಾರ್ಯಾಲಯವು ಕ್ಷೀಪ್ರ ಕ್ರಮಕೈಗೊಂಡಿದ್ದು, ದೇವಾಲಯದ ಮಹಾದ್ವಾರದ ಬಳಿಯಿಂದ ಹಿಡಿದು ಬಿಸಿಲು ಬೀಳುತ್ತಿದ್ದ ಕಡೆಗಳಲೆಲ್ಲ ಕಾರ್ಪೆಟ್ ಹಾಕಿ ಭಕ್ತರ ಕಾಲು ಸುಡದಂತೆ ವ್ಯವಸ್ಥೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net