ಖಾಸಗಿ ಸಂಸ್ಥೆಯಲ್ಲಿ ಹುದ್ದೆ ಖಾಲಿ: ಜೂ.28ರಂದು ನಗರದಲ್ಲಿ ನೇರ ಸಂದರ್ಶನ

job fair
Published on

ಮಂಡ್ಯ: ಮೆಡ್‌ಪ್ಲಸ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಅಮ್ವಿನ್ ಮ್ಯಾಚಿಂಗ್ ಪ್ರೈ ಲಿಮಿಟೆಡ್, ಇನೋವೆಟಿವ್ ಇನೋವ ಸಿಎನ್‌ಸಿ ಪ್ರೈ ಲಿಮಿಟೆಡ್, ಟೆಕ್ಸಲ್ ಇಂಜಿನಿಯರಿಂಗ್ ಮತ್ತು ಪ್ರಗತಿ ಪ್ರಿಸೀಷನ್‌ನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕ ಮಾಡಿಕೊಳ್ಳಲು ಜೂ.28ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿಯಲ್ಲಿ ಉತ್ತೀರ್ಣರಾದ 18 ರಿಂದ 45 ವರ್ಷದೊಳಗಿನವರು ಸ್ವ ವಿವರೊಂದಿಗೆಅಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 8660061488 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net