

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಜೂ.25ರಂದು ಇಲ್ಲಿನ ಗಾಂಧಿನಗರ 2ನೇ ಕ್ರಾಸ್‌ನಲ್ಲಿರುವ ಬಂಧನ್ ಬ್ಯಾಂಕ್‌ನಲ್ಲಿ 500 ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಆಯೋಜಿಸಲಾಗಿದೆ.
ಮಂಡ್ಯ, ಮದ್ದೂರು, ಹಲಗೂರು, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಬನ್ನೂರಿನಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ದ್ವಿಚಕ್ರ ವಾಹನ ಹೊಂದಿರುವ, ಪಿಯುಸಿ ಮತ್ತು ಯಾವುದೇ ಪದವಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅಂದು ಬೆಳಗ್ಗೆ 10ಗಂಟೆಗೆ ಸ್ವವಿವರೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದವರಿಗೆ ಮಾಸಿಕ 14500 ಸಾವಿರ ರೂಗೂ ಹೆಚ್ಚು ವೇತನದ ಜತೆಗೆ ಪಿಎ್ ಹಾಗೂ ವಸತಿ ಸೌಲಭ್ಯ, ಟಿ.ಎ ವಾರ್ಷಿಕ ಬೋನಸ್ ಮತ್ತು ವಿಮೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.