ಮಂಡ್ಯ: ಮಂಡ್ಯ ಉಪವಿಭಾಗಾಧಿಕಾರಿಯಾಗಿ ಎಂ.ಶಿವಮೂರ್ತಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಎಂ.ಶಿವಮೂರ್ತಿ ಅವರು ಈ ಹಿಂದೆ ಕೆ.ಆರ್.ಪೇಟೆಯಲ್ಲಿ ಮೂರು ವರ್ಷ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ನಂಜನಗೂಡಿನಲ್ಲಿ ತಹಸೀಲ್ದಾರ್ ಹಾಗೂ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ನಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂ.ಶಿವಮೂರ್ತಿ ಅವರಿಗೆ ಪದೋನ್ನತಿ ನೀಡಿ ಉಪವಿಭಾಗಾಧಿಕಾರಿಯಾಗಿ ನಿಯೋಜಿಸಿದೆ. ಈ ಮೊದಲು ಮಂಡ್ಯ ಉಪವಿಭಾಗಾಧಿಕಾರಿ (ಪ್ರಭಾರಿ) ಯಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು.