

ಮಂಡ್ಯ: ಜಿಲ್ಲೆಯ ಗೃಹರಕ್ಷಕದಳದಲ್ಲಿ ಖಾಲಿಯಿರುವ 49 ಗೃಹರಕ್ಷಕರ ಸ್ಥಾನ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
10ನೇ ತರಗತಿ ಪಾಸಾಗಿರುವ 19 ರಿಂದ 40 ವರ್ಷ ವಯೊಮಿತಿಯುಳ್ಳ ಆಸಕ್ತರು ಇಲ್ಲಿನ ವಿವೇಕಾನಂದ ನಗರದಲ್ಲಿರುವ ಬಿ.ಸಿ.ಎಂ ಹಾಸ್ಟಲ್ ಹತ್ತಿರದ ಕೆರೆ ಅಂಗಳದಲ್ಲಿರುವ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ. ಈಗಾಗಲೇ ಸೇವೆಯಲ್ಲಿದ್ದು, ವಿವಿಧ ಪ್ರಕರಣದಡಿ ಸಮಾಲೋಪನೆಗೊಂಡಿರುವ ಗೃಹರಕ್ಷಕರಿಗೆ ಪುನಃ ಅರ್ಜಿ ವಿತರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.