ಗುತ್ತಿಗೆ ಆಧಾರದಲ್ಲಿ ನೇಮಕಾತಿ: ಬ್ಯಾಂಕ್ ಆಫ್ ಬರೋಡ ಸ್ವ-ಉದ್ಯೋಗ ಸಂಸ್ಥೆಯಲ್ಲಿ ಅವಕಾಶ

bank of baroda
Published on

ಮಂಡ್ಯ: ಬ್ಯಾಂಕ್ ಆಫ್ ಬರೋಡ ಸ್ವ-ಉದ್ಯೋಗ ಸಂಸ್ಥೆಯಲ್ಲಿ ಖಾಲಿ ಇರುವ ಬೆಂಬಲ ಸಿಬ್ಬಂದಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

22 ರಿಂದ 40 ವರ್ಷದೊಳಗಿನ ಸ್ನಾತಕೋತ್ತರ ಪದವಿ MSW/M.A in Rural Development, Socialogy/ Psychology ಅಥವಾ B.Sc(Agri.)/ BA with B.Ed ವಿದ್ಯಾರ್ಹತೆ ಹೊಂದಿದ್ದು, ಕನ್ನಡದಲ್ಲಿ ಉತ್ತಮ ಸಂವಹನ ಕೌಶಲ ಹೊಂದಿರಬೇಕು. ತರಬೇತಿ ನೀಡಲು ಆಸಕ್ತಿ ಹಾಗೂ ಅನುಭವ ಹೊಂದಿದವರಾಗಿದ್ದು, ಜನರೊಂದಿಗೆ ಉತ್ತಮ ಸಂಪರ್ಕ ಹೊಂದುವ ಗುಣವಿರಬೇಕು. ಕಂಪ್ಯೂಟರ್‌ನಲ್ಲಿ ಜ್ಞಾನ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳನ್ನು ಸಾಮಾನ್ಯ ಹಾಗೂ ಕಂಪ್ಯೂಟರ್ ಜ್ಞಾನದ ಬಗ್ಗೆ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡು ಮಾಸಿಕ 22,500 ರೂ. ಸಂಭಾವನೆಯನ್ನು ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು 1 ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಅರ್ಜಿಯನ್ನು ಪೂರ್ವ ಅನುಭವ ಮತ್ತು ಈಗ ಮಾಡುತ್ತಿರುವ ಉದ್ಯೋಗದ ವಿವರದೊಂದಿಗೆ ಸ್ವ-ವಿಳಾಸ ನಮೂದಿಸಿದ ಅಂಚೆಚೀಟಿ ಲಗತ್ತಿಸಿದ ಲಕೋಟೆಯೊಂದಿಗೆ ಮಾ.21 ರೊಳಗೆ ನಗರದಲ್ಲಿರುವ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ದೂ.ಸಂ 08232-231497, 231293, ಮೊ.ಸಂ 9481313497 ಹಾಗೂ vibseti.mdy@gmail.com ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net