ಕಾಂಗ್ರೆಸ್ ಸುಂಟಿಕೊಪ್ಪ ಹೋಬಳಿಯ ವಿವಿಧ ಘಟಕಗಳಿಗೆ ನೇಮಕ

22RIAZKA
ರಜಾಕ್
Published on

ಸುಂಟಿಕೊಪ್ಪ: ಕಾಂಗ್ರೆಸ್ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾಗಿ ರಜಾಕ್, ನಗರ ಅಧ್ಯಕ್ಷರಾಗಿ ರಫೀಕ್‌ಖಾನ್, ಯುವ ಘಟಕದ ಅಧ್ಯಕ್ಷರಾಗಿ ಅನೂಪ್ ಹಾಗೂ ಸುಂಟಿಕೊಪ್ಪ ಪಂಚಾಯಿತಿ ವಲಯದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಬ್ಧುಲ್ ಅಜೀಜ್ ಆಯ್ಕೆಯಾದರು.

ಗದ್ದೆಹಳ್ಳದ ಎಸ್.ಎಸ್.ಇಂಟರ್‌ನ್ಯಾಷಷನಲ್ ಸಭಾಂಗಣದಲ್ಲಿ ಶಾಸಕ ಮಂತರ್‌ಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್, ಸುಂಟಿಕೊಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಿವಮ್ಮ , ಸದಸ್ಯ ಸಬಾಸ್ಟೀನ್, ಮಾಜಿ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ನಿರ್ಮಲಾ ಶೇಷಪ್ಪ, ರತ್ನಾ, ರಜಾಕ್, ಬೂತ್ ಅಧ್ಯಕ್ಷ ಷರೀಫ್, ಅಲ್ಪಸಂಖ್ಯಾತ ಘಟಕದ ಕುಶಾಲನಗರ ಬ್ಲಾಕ್ ಅಧ್ಯಕ್ಷ ಅಬ್ದುಲ್ ರಜಾಕ್, ಸುಂಟಿಕೊಪ್ಪ ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್, ಎನ್‌ಎಸ್‌ಯುಐ ಘಟಕದ ಜಿಲ್ಲಾ ಉಪಾದ್ಯಕ್ಷ ಹಾರಿಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net