

ಮಂಡ್ಯ: ಭಾರತೀಯ ಸೇನಾ ಪಡೆ ಮತ್ತು ಟೆರಿಟೋರಿಯಲ್ ಆರ್ಮಿ ವತಿಯಿಂದ ಆಫೀಸರ್ಸ್ ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತೀಯ ನಾಗರಿಕನಾಗಿದ್ದು, ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಯಾವುದೇ ಪದವಿಯನ್ನು ಹೊಂದಿರಬೇಕು. 18 ರಿಂದ 42 ವರ್ಷ ವಯೋಮಿತಿಯೊಳಗಿನವರು ಜೂ.10ರೊಳಗೆ ಭಾರತೀಯ ಸೇನಾಪಡೆಯ ಜಾಲತಾಣ www.indianarmy.nic.in ಮಾಹಿತಿ ಪಡೆದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ ದೂ.ಸಂ 08232-295124 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.