

ಮಂಡ್ಯ: ಯುವ ಸ್ಪಂದನ ಕಾರ್ಯಕ್ರಮದಡಿ ಜಿಲ್ಲಾ ಕಚೇರಿಗೆ ಒರ್ವ ಯುವ ಸಮಾಲೋಚಕ ಮತ್ತು ಮಳವಳ್ಳಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಖಾಲಿ ಇರುವ ಯುವ ಪರಿವರ್ತಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಆಸಕ್ತ 21 ರಿಂದ 35 ವರ್ಷದೊಳಗಿನ ಸಮಾಜಕಾರ್ಯ, ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಪದವೀಧರರಾಗಿರುವ ಹಾಗೂ ನಿಗದಿತ ತಾಲೂಕಿನ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿನ ಕಾಯಂ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ ನೀಡಿ ಯುವ ಪರಿವರ್ತಕರೆಂದು ಪ್ರಮಾಣೀಕರಿಸಲಾಗುತ್ತದೆ. ಅರ್ಹರು ಜೂ.28ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಖುದ್ದು ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ.ಸಂ 9008896074 ಅಥವಾ 9632104204 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.