

ಮಂಡ್ಯ: ಭಾರತೀಯ ವಾಯುಪಡೆ ವತಿಯಿಂದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗಾಗಿ ಅಗ್ನಿವೀರ್ ವಾಯು(ಮ್ಯೂಸಿಶಿಯನ್) ಹುದ್ದೆ ನೇಮಕಾತಿ ಅರ್ಜಿ ಆಹ್ವಾನಿಸಿದೆ.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಿದವರಿಗೆ ಜೂ.10 ರಿಂದ 18ರವರೆಗೆ ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿನ ಎ.ಎಸ್ಸಿ ಹಾಗೂ ನವದೆಹಲಿಯ ಏರ್‌ಫೋರ್ಸ್ ಸ್ಟೇಷನ್‌ನಲ್ಲಿರುವ ಎ.ಎಸ್ಸಿ ಕ್ಯಾಂಪ್‌ನಲ್ಲಿ ಪರೀಕ್ಷೆ ನಡೆಸಲಾಗುವುದು. ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂ.ಸಂ 08232-295124/29512199 ಅಥವಾ ಭಾರತೀಯ ವಾಯುಪಡೆಯ ಜಾಲತಾಣವಾದ www.agnipathvayu.cdac.in ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.