

ಸಿಂಧನೂರು: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಕಾಲೇಜ್ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕಾಲೇಜ್‌ನಲ್ಲಿ ಇಬ್ಬರೇ ಕಾಯಂ ಉಪನ್ಯಾಸಕರಿದ್ದು, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಮಾಡಲಾಗುತ್ತಿದೆ. ಇದರಿಂದ ಪಾಠ-ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ.
ಕಾಲೇಜ್ ಆರಂಭಗೊಂಡು ಎರಡು ವಾರ ಕಳೆದಿದ್ದು, ತರಗತಿಗಳು ನಡೆಯುತ್ತಿಲ್ಲ. ಕೂಡಲೇ ಕಾಯಂ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.
ಪ್ರಮುಖರಾದ ಶ್ರೀದೇವಿ, ಶಿಲ್ಪಾ, ಲಕ್ಷ್ಮೀ, ಶ್ವೇತಾ, ಶರಣಮ್ಮ, ಅಶ್ವಿನಿ ಇತರರಿದ್ದರು.