ಚಿತ್ರಕಲಾ, ಸಂಗೀತ ಶಿಕ್ಷಕರನ್ನು ನೇಮಕ ಮಾಡಿ

13-12-Shiva-2
ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ, ರಂಗ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರು ಬುಧವಾರ ಪ್ರತಿಭಟನೆ ನಡೆಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಪದಾಕಾರಿಗಳಾದ ವಿನೋದಕುಮಾರ, ಎಚ್.ಎಚ್.ಮ್ಯಾದಾರ, ತಿಮ್ಮಪ್ಪ, ಮಲ್ಲಪ್ಪ, ಪಿ.ಎ.ಬಿ.ಈಶ್ವರ, ವೀರೇಶ, ರಾಮಣ್ಣ ಮ್ಯಾದಾರ, ರೂಪಾದೇವಿ, ವೀರೇಶಬಾಬು, ಮೀನಾಕ್ಷಿ, ಪದ್ಮಾವತಿ, ಎಚ್.ಶ್ಯಾಮಲಾ, ಗೋವಿಂ, ರೇಣುಕಾ, ಸೌಜನ್ಯ ಇದ್ದರು.
Published on

ರಾಯಚೂರು: ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಚಿತ್ರಕಲಾ, ಸಂಗೀತ ಮತ್ತು ರಂಗ ಶಿಕ್ಷಕರನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಎಐಡಿವೈಒ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರ ಬುಧವಾರ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಹಲವು ವರ್ಷಗಳಿಂದ ಚಿತ್ರಕಲೆ, ಸಂಗೀತ ಮತ್ತು ರಂಗ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ. ಇದರಿಂದಾಗಿ ಬಹಳಷ್ಟು ಶಾಲೆಗಳಲ್ಲಿ ಚಿತ್ರಕಲೆ, ಸಂಗೀತ ಶಿಕ್ಷಕರಿಲ್ಲದಂತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ 5,240 ಸರ್ಕಾರಿ ಪ್ರೌಢಶಾಲೆಗಳಲಿದ್ದು, ಅವುಗಳಲ್ಲಿ ಚಿತ್ರಕಲೆ, ಸಂಗೀತ ಶಿಕ್ಷಕರ ಸಂಖ್ಯೆ 1,500 ದಾಟಿಲ್ಲ. ಅನೇಕ ಶಿಕ್ಷಕರು ನಿವೃತ್ತಿ ಅಂಚಿನಲ್ಲಿದ್ದು, ಮಕ್ಕಳ ಸಂಖ್ಯೆ ಆಧಾರದ ಮೇಲೆ ಶಿಕ್ಷಕರನ್ನು ಹುದ್ದೆ ಸಹಿತ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಬಹುತೇಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದಂತಾಗಿದೆ.
ಅನೇಕ ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. 2008-09ನೇ ಸಾಲಿನಲ್ಲಿ 600 ಸಹಪಠ್ಯ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ವಸತಿ ಶಾಲೆಗಳಲ್ಲಿಯೂ ಚಿತ್ರಕಲೆ, ಸಂಗೀತ ಶಿಕ್ಷಕರಿಲ್ಲ. ಮಕ್ಕಳು ಜ್ಞಾನಾರ್ಜನೆ ಜತೆಗೆ ಇತರೆ ಚಟುವಟಿಕೆಗಳಲ್ಲಿ ತೊಡಗುವುದು ಅವಶ್ಯವಾಗಿದೆ.
ಈ ನಿಟ್ಟಿನಲ್ಲಿ ವಿಷಯವಾರು ಶಿಕ್ಷಕರ ಜತೆಗೆ ಚಿತ್ರಕಲೆ, ಸಂಗೀತ, ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅಸೂಚನೆ ಹೊರಡಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಹುದ್ದೆಗಳನ್ನು ರದ್ದುಪಡಿಸುವುದನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಪದಾಕಾರಿಗಳಾದ ವಿನೋದಕುಮಾರ, ಎಚ್.ಎಚ್.ಮ್ಯಾದಾರ, ತಿಮ್ಮಪ್ಪ, ಮಲ್ಲಪ್ಪ, ಪಿ.ಎ.ಬಿ.ಈಶ್ವರ, ವೀರೇಶ, ರಾಮಣ್ಣ ಮ್ಯಾದಾರ, ರೂಪಾದೇವಿ, ವೀರೇಶಬಾಬು, ಮೀನಾಕ್ಷಿ, ಪದ್ಮಾವತಿ, ಎಚ್.ಶ್ಯಾಮಲಾ, ಗೋವಿಂ, ರೇಣುಕಾ, ಸೌಜನ್ಯ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net