ದಾಖಲೆ ಮೊತ್ತದ ಆಭರಣ ಮಾರಾಟ

New Gold New 81818
Published on

ಹುಬ್ಬಳ್ಳಿ : ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣ ಖರೀದಿಸಿದರೆ ಶುಭ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶುಕ್ರವಾರದಂದು ದಾಖಲೆಯ ವಹಿವಾಟು ನಡೆದಿದೆ.

ಶುಕ್ರವಾರ ಒಂದೇ ದಿನ ಹುಬ್ಬಳ್ಳಿಯ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ 3.5 ಕೆಜಿ ಬಂಗಾರದ ಆಭರಣ ಹಾಗೂ 150 ಕೆಜಿಗೂ ಹೆಚ್ಚು ಬೆಳ್ಳಿಯ ಆಭರಣಗಳ ಮಾರಾಟವಾಗಿದೆ. ಇದರ ಮೊತ್ತ ಅಂದಾಜು 4 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಕೋವಿಡ್ ನಂತರದ ವರ್ಷಗಳಲ್ಲಿ ಇಷ್ಟೊಂದು ದೊಡ್ಡಮಟ್ಟದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮಾರಾಟವಾಗಿರುವುದು ಇದೇ ಮೊದಲು ಎಂದು ಹೇಳುತ್ತಾರೆ ಉತ್ತರ ಕರ್ನಾಟಕ ಜ್ಯುವೆಲರ್ಸ್ ಸಂಘಗಳ ಮಹಾಸಭಾದ ಅಧ್ಯಕ್ಷ ಗೋವಿಂದ ನಿರಂಜನ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net