ಲೋಕೋಸ್ ತಂತ್ರಾಂಶದಲ್ಲಿ ಮಾಹಿತಿ ದಾಖಲು

nrp narega
ಎನ್.ಆರ್.ಪುರ ತಾಪಂನಲ್ಲಿ ನಡೆದ ತರಬೇತಿ ಸಮಾರೋಪದಲ್ಲಿ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಮಾತನಾಡಿದರು. ಭರತ್, ಸುಬ್ರಹ್ಮಣ್ಯ, ಶಿಬಿಮರಿಯಮ್ಮ, ಡಯಾನಾ ಇದ್ದರು.
Published on

ಎನ್.ಆರ್.ಪುರ: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೇಜನೆಯಡಿ ಸ್ವಸಹಾಯ ಸಂಘಗಳ ಮತ್ತು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಹಣದ ವ್ಯವಹಾರದ ಮಾಹಿತಿಯನ್ನು ಇನ್ನುಮುಂದೆ ಪುಸ್ತಕದ ಬದಲಾಗಿ ಅಂತರ್ಜಾಲದ ಮೂಲಕ ಪುಸ್ತಕದ ರೂಪದಲ್ಲಿ ದಾಖಲೆ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಎಂ.ಜಿ.ಮನೀಶ್ ತಿಳಿಸಿದರು.

ತಾಪಂನಲ್ಲಿ 3 ದಿನಗಳ ಎನ್‌ಆರ್‌ಎಲ್‌ಎಂ ಯೋಜನೆಯ ಸ್ವಸಹಾಯ ಸಂಘಗಳ ಮತ್ತು ಸಂಜೀವಿನಿ ಗ್ರಾಮ ಮಟ್ಟದ 14 ಗ್ರಾಪಂಗಳ ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಿಗೆ ಆಯೋಜಿಸಿದ್ದ ತರಬೇತಿ ಸಮಾರೋಪದಲ್ಲಿ ಮಾತನಾಡಿದರು.
ಇನ್ನುಮುಂದೆ ಎಲ್ಲ ಆರ್ಥಿಕ ವ್ಯವಹಾರ ಕಂಪ್ಯೂಟರ್ ಮೂಲಕ ನಡೆಸಲಾಗುತ್ತದೆ. ಎಲ್ಲ ಪುಸ್ತಕ ಬರಹಗಾರರು ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲ ಮಾಹಿತಿಯನ್ನು ಲೋಕೋಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ತಾಲೂಕಿನ ಪ್ರಗತಿಯನ್ನು ಜಿಲ್ಲೆಯಲ್ಲೇ ಮೊದಲ ಸ್ಥಾನಕ್ಕೆ ತರಬೇಕು ಎಂದು ತಿಳಿಸಿದರು.
ತರಬೇತುದಾರರಾಗಿ ಆಗಮಿಸಿದ್ದ ಜಿಲ್ಲಾ ಅಭಿಯಾನ ನಿರ್ವಹಣ ಘಟಕದ ಡಿಎಂಐಎಸ್ ಭರತ್ ಮಾತನಾಡಿ, 3 ದಿನ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ಅವಶ್ಯಕತೆ ಇದ್ದಲ್ಲಿ ನೀಡಲಾಗುವುದು. ಯಾವುದೇ ಸಮಸ್ಯೆ ಇದ್ದರೆ ಹೇಳಿದರೆ ಬಗೆಹರಿಸಿಕೊಡುತ್ತೇವೆ ಎಂದರು.
ಎನ್‌ಆರ್‌ಎಲ್‌ಎಂ ಯೋಜನೆ ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಮಾತನಾಡಿ, ಸ್ವಸಹಾಯ ಸಂಘಗಳ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲ ವ್ಯವಹಾರ ಕ್ರೋಢೀಕರಿಸುವ ಜವಾಬ್ದಾರಿ ಮುಖ್ಯಪುಸ್ತಕ ಬರಹಗಾರರ ಮೇಲಿದೆ. ಲೋಕೋಸ್ ತಂತ್ರಾಂಶದ ಹಣದ ತರಬೇತಿ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ತರಬೇತಿಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಹೇಳಿದರು.
ಎನ್.ಆರ್.ಪುರ ತಾಲೂಕು ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಶಿಬಿ ಮರಿಯಮ್ಮ, ತಾಲೂಕು ಒಕ್ಕೂಟದ ಖಜಾಂಚಿ ಡಯನಾ, ತರಬೇತುದಾರರಾದ ಭರತ್, ರಾಜೇಶ್, ಚೇತನ್, ಕಿಶೋರ್‌ಕುಮಾರ್, ಶ್ವೇತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net