ದಾಖಲೆ ಸಲ್ಲಿಸದಿದ್ದರೆ ಒತ್ತುವರಿ ತೆರವು

11-01.MDL.01
Published on

ಮುದಗಲ್: ಪಟ್ಟಣದಲ್ಲಿ ಒತ್ತುವರಿಯಾದ ಜಾಗಳನ್ನು ಪುರಸಭೆ ಮುಖ್ಯಾಧಿಕಾರಿ ಎಂ.ನಬಿಸಾಬ್ ಕಂದಗಲ್ ಬುಧವಾರ ಪರಿಶೀಲನೆ ನಡೆಸಿದರು.

ಒತ್ತುವರಿಯಾಗಿರುವ ಜಾಗ ತೆರವುಗೊಳಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಯೊಂದಿಗೆ ಸೋಮವಾರ ಪೇಟೆ, ವೆಂಕಟರಾಯನ ಪೇಟೆ, ನೀರದೊಡ್ಡಿ ಇತರೆಡೆ ಭೇಟಿ ನೀಡಿದರು. ಒತ್ತುವರಿ ಮಾಡಿದವರು ಸೂಕ್ತ ದಾಖಲೆ ಸಲ್ಲಿಸದಿದ್ದರೆ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಸೂಚಿಸಿದರು.

ಪುರಸಭೆ ನೈರ್ಮಲ್ಯಾಧಿಕಾರಿ ಆರೀಫ್ ಉನ್ನಿಸ್ ಬೇಗಂ, ರೆಹಮತುನ್ನೀಸಾ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net