

ರಾಯಚೂರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ನಗರದ ಶಿವಪುರ ಕಾಲೋನಿಯಲ್ಲಿ ಜರುಗಿದೆ.
ಮಾಲೀಕೆ ಸರೋಜ ಅವರ ಮನೆಯ ಸ್ನಾನದ ಕೋಣೆಯಲ್ಲಿನ ಗೀಜರ್‌ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಮನೆಯಲ್ಲ ಹೊತ್ತಿಕೊಂಡು ಸರೋಜ ಅವರ ಪುತ್ರ ಚಿತ್ರ ಕಲಾವಿದ ಭೀಮರಾವ್ ಅವರಿಗೆ ಸೇರಿದ ೫ ಲಕ್ಷ ಮೌಲ್ಯದ ಆರ್ಟ್ ಪೇಯಿಂಟಿAಗ್‌ಗಳು, ೫೦ ಸಾವಿರ ರೂಪಾಯಿ ನಗದು ಹಣ , ಮನೆ ಆಸ್ತಿ ದಾಖಲೆಗಳು ಸುಟ್ಟುಭಸ್ಮವಾಗಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ನಗರದ ಪಶ್ಚಿಮ ಪೊಲೀಸï ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.