ದೈವಜ್ಞ ಬ್ರಾಹ್ಮಣ ಎಂದು ದಾಖಲಿಸಿ

sathish sheat
Published on

ಮಡಿಕೇರಿ: ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆ ೨೦೨೫ರಲ್ಲಿ ಸೆ.೨೨ ರಿಂದ ನಡೆಯುವ ರಾಜ್ಯ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ದೈವಜ್ಞ ಬ್ರಾಹ್ಮಣ ಎಂದೇ ಜಾತಿ ಕಲಂನಲ್ಲಿ ನಮೂದಿಸಬೇಕೆಂದು ಮಡಿಕೇರಿಯ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ವಲಯಾಧ್ಯಕ್ಷರಾದ ಸತೀಶ್ ಶೇಟ್ ಮನವಿ ಮಾಡಿದರು.

ಮಡಿಕೇರಿಯಲ್ಲಿ ಬುಧವಾರ ನಡೆದ ಜಾತಿಗಣತಿ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉಪಜಾತಿ ಕಾಲಂನಲ್ಲಿಯೂ ದೈವಜ್ಞ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದ ಅವರು, ಸಮೀಕ್ಷೆಯಲ್ಲಿ ಸಮೂದಾಯವು ಹಿಂದುಳಿದ ಪ್ರವರ್ಗಗಳ ಔಃಅ (ಂ) ಕಲಂನಲ್ಲಿ ಬರಲಿದೆ. ಆದ್ದರಿಂದ ತಮ್ಮ ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರು ನಿಖರವಾದ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು.

ಈ ಮಾಹಿತಿಯನ್ನು ಪ್ರತಿ ಗ್ರಾಮ ತಾಲೂಕು ಮಟ್ಟದಲ್ಲಿ ತಮ್ಮ ಕ್ಷೇತ್ರದ ಸಮಾಜದ ಮುಖಂಡರು ಸ್ವಯಂ ಪ್ರೇರಿತರಾಗಿ ತಿಳಿಸಬೇಕು. ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಬೇಕು. ಇದರಿಂದ ನಮ್ಮ ಸಾಮಾಜದ ಜನ ಸಂಖ್ಯೆಯ ನಿಖರವಾದ ಮಾಹಿತಿ ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ತುಂಬಾ ಅಗತ್ಯವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ದೈವಜ್ಞ ಬ್ರಾಹ್ಮಣ ಸಂಘದ ಮಡಿಕೇರಿಯ ಅಧ್ಯಕ್ಷರ ಬಿ.ವಿ.ರೋಷನ್, ಬಿ.ಹೆಚ್.ಉಲ್ಲಾಸ್, ಎಸ್.ಎ.ವಿನಾಯಕ್ ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net