

ಆನೇಕಲ್ : ವಿದ್ಯುತ್ ಸಂಪರ್ಕ ಕಾಯ್ದೆಯನ್ನು ಮರುಪರಿಶೀಲಿಸಬೇಕು. ಏಕಾಏಕಿ ನಿಯಮಗಳನ್ನು ಬದಲಾಯಿಸುವುದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯುತ್ ಗುತ್ತಿಗೆದಾರರಿಗೆ ತೊಂದರೆಯಾಗಲಿದೆ ಎಂದು ವಿದ್ಯುತ್ ಗುತ್ತಿಗೆದಾರ ಶಿವಾನಂದ ರೆಡ್ಡಿ ಹೇಳಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆನೇಕಲ್ ತಾಲೂಕು ವಿದ್ಯುತ್ ಗ್ರಾಹಕರಿಂದ ತಾಲೂಕಿನ ಸೂರ್ಯ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸಾಲ ಮಾಡಿ ಮನೆ ಕಟ್ಟುವವರಿಗೆ ದಾಖಲೆಗಳು ಇಲ್ಲದೇ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಬಿಬಿಎಂಪಿ ಖಾತೆಗಳಿಗೂ ಸಹ ವಿದ್ಯುತ್ ಸಂಪರ್ಕ ಇಲ್ಲ. ರಾಜ್ಯ ಸರ್ಕಾರದ ವಿದ್ಯುತ್ ಸಂಪರ್ಕ ಕಾಯ್ದೆಯನ್ನು ಮರುಪರಿಶೀಲನೆ ನಡೆಸುವ ಅವಶ್ಯಕತೆಯಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಕಾಯ್ದೆ ಮಂಡಿಸಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಾಯ್ದೆಯಿಂದ ಹೆಚ್ಚು ತೊಂದರೆಯಾಗಲಿದೆ. ಹೊಸ ಮನೆಗಳನ್ನು ಕಟ್ಟುವವರಿಗೆ ಬೆಸ್ಕಾಂ ಇಲಾಖೆ ಸಿಸಿ(ಕಂಪ್ಲೆಷನ್ ಸರ್ಟಿಫಿಕೇಟ್) ಮತ್ತು ಓಸಿ(ಒಕ್ಯೂಪೆನ್ಸಿ ಸರ್ಟಿಫಿಕೇಟ್) ಕೇಳುತ್ತಿದ್ದಾರೆ. ಏಕಾಏಕಿ ಹೊಸ ಹೊಸ ನಿಯಮ ರೂಪಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಇದನ್ನೇ ನಂಬಿರುವ ವಿದ್ಯುತ್ ಗುತ್ತಿಗೆದಾರರಿಗೂ ನಷ್ಟವಾಗಲಿದೆ ಎಂದರು.
ಚಂದಾಪುರ ವಿಭಾಗದಲ್ಲಿ ವಿದ್ಯುತ್ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ತ್ವರಿತವಾಗಿ ಆರ್ಆರ್ ನಂಬರ್ ನೀಡಬೇಕು ವಿದ್ಯುತ್ ಸಂಪರ್ಕ ಮೂಲ ಸೌಲಭ್ಯವಾಗಿದ್ದು, ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ನೀಡಬೇಕು. ಸಾರ್ವಜನಿಕರು ಹಣ ಸಂದಾಯ ಮಾಡಿದ್ದರೂ ವಿದ್ಯುತ್ ಮಾಪಕಗಳು ದೊರೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಓಸಿ, ಸಿಸಿಗೆ ಕೇಳುತ್ತಾರೆ. ಈ ದಾಖಲೆಗಳನ್ನು ಪಡೆಯುವುದೇ ಸಾರ್ವಜನಿಕರಿಗೆ ದೊಡ್ಡ ತೊಂದರೆಯಾಗಿದೆ ಎಂದರು.
ರಾಜ್ಯದಲ್ಲಿ 15ಸಾವಿರ ವಿದ್ಯುತ್ ಗುತ್ತಿಗೆದಾರರಿದ್ದು, ಈ ನಿಮಯಗಳಿಂದಾಗಿ ಅವರಿಗೆ ಕೆಲಸವಿಲ್ಲದ್ದಂತಾಗಿದೆ. ವಿದ್ಯುತ್ ಪರವಾನಗಿ ಪಡೆಯಲು ಕಠಿಣ ನಿಯಮ ರೂಪಿಸಿದೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಗಮನ ತರಬೇಕು. ನೆಯಿಲ್ಲದಿದ್ದರೆ ವಿದ್ಯುತ್ ಸಂಪರ್ಕವಿಲ್ಲ ಎಂಬ ನಿಯಮವಿದೆ. ಹಾಗಾಗಿ ಮನೆ ಮಾಲೀಕರು ಸಹ ನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದ್ದರಿಂದ ನೆ ನೀಡಲು ನಿಯಮ ಸಡಿಲಗೊಳಿಸಬೇಕು. | ನಾಗರಾಜು ವಿದ್ಯುತ್ ಗುತ್ತಿಗೆದಾರ ಸಾಲಶೂಲ ಮಾಡಿ ಮನೆ ಕಟ್ಟುತ್ತೇವೆ. ಆದರೆ ಮನೆಗೆ ವಿದ್ಯುತ್ ಸಂಪರ್ಕವೇ ದೊರೆಯದಿದ್ದಾಗ ಮನೆ ಮಾಲೀಕರು ಎಲ್ಲಿ ಹೋಗಬೇಕು?. ಅಧಿಕಾರಿಗಳು ಸರ್ಕಾರದ ನಿಯಮವೇ ಅಂತಿಮ ಎನ್ನುತ್ತಾರೆ. ಆದರೆ ಇಂತಹ ನಿಯಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮುಂದೆ ಇಎಂಐ ಕಟ್ಟಲೂ ಹಣವಿಲ್ಲದಂತಾಗುತ್ತದೆ. ಏಕಾಏಕಿ ನಿಯಮ ಬದಲಾವಣೆಯಿಂದಾಗಿ ಬಾಡಿಗೆಗೆ ಮನೆ ಸಹ ಸಿಗುತ್ತಿಲ್ಲ. | ಮೇನಾ ಗ್ರಾಹಕರು