ಬಗರ್​ ಹುಕುಂ ಸಾಗುವಳಿ ಅರ್ಜಿ ಮರುಪರಿಶೀಲಿಸಿ

mm 20-2
Published on

ವಿಜಯಪುರ: ಪರಿಶಿಷ್ಟ ಜಾತಿ/ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್​ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಜತೆಗೆ ವಿನಾಕಾರಣ ವಜಾ ಗೊಳಿಸಿರುವ ಅರ್ಜಿಗಳನ್ನು ಮರುಪಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಷ ಸಮಿತಿ (ಅಂಬೇಡ್ಕ್​ರವಾದ) ಜಿಲ್ಲಾ ಟಕದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್​ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂದ ಬೆಳಗಾವಿ ವಿಭಾಗದ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ಪರಿಶಿಷ್ಟ ಪಿಟಿಸಿಎಲ್​ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಯ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೈಕೋರ್ಟ್​ಗಳಲ್ಲಿ ಪಿಟಿಸಿಎಲ್​ ಪ್ರಕರಣಗಳು ವಜಾಗೊಳ್ಳುತ್ತಿದ್ದು, ನುರಿತ ಹಿರಿಯ ವಕೀಲರನ್ನು ನೇಮಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್​ನಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಜೂರಾದ ಭೂಮಿಯಲ್ಲಿ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವುದನ್ನು ಕೂಡಲೇ ತಡೆಗಟ್ಟಬೇಕು. ಅಧಿಕಾರಿಗಳ ವಿರುದ್ಧ ಎಸ್​ಸಿ/ಎಸ್​ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು

ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ಅಡಿವೆಪ್ಪ ಸಾಲಗಲ್​ ಮತ್ತು ರಾಜು ಕುಚಬಾಳ ಮಾತನಾಡಿದರು. ಶಂಕರ ಚಲವಾದಿ, ಸವಿತಾ ವಗ್ಗರ, ಭೀಮು ಉತ್ನಾಳ, ಮಹಾಂತೇಶ ರಾಠೋಡ, ಹುಚ್ಚಪ್ಪ ಲೋಕುರ, ಭೀಮಣ್ಣ ಹಂಚಿನಾಳ, ರುಕಮುದ್ದಿನ್​ ಹೊನವಾಡ, ನಕುಶಾ ಹೊಸಮನಿ, ಸುಮಿತ್ರಾ ಕಾಂಬಳೆ, ರಾಜು ಹರಿಜನ, ರಮೇಶ ಚಲವಾದಿ, ಪ್ರಕಾಶ ಚಲವಾದಿ, ನಾಗರಾಜ ಕಾಂಬಳೆ, ರಾಜು ಹರಿಜನ, ಸಿದ್ದಪ್ಪ ಪೂಜಾರಿ, ಗೊವಿಂದ ಜಾಧವ, ವಿಠೋಬಾ ಕಾಂಬಳೆ, ಮಹಾಂತೇಶ ರಾಠೋಡ, ಭಾಸ್ಕರ ಬೋರಗಿ, ಸುಭಾಶ್ಚಂದ್ರ ಹೊನ್ನಕಂಠಿ, ಪ್ರದಿಪ ಚಲವಾದಿ, ಯಲ್ಲಪ್ಪ ಕಾಂಬಳೆ ಮತ್ತಿತರರಿದ್ದರು.

ಬಗರ್​ ಹಕುಂ ಸಾಗುವಳಿ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಷ ಸಮಿತಿ ಪದಾಧಿಕಾರಿಗಳು ವಿಜಯಪುರ ತಹಸೀಲ್ದಾರ್​ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು. ಸಂಜು ಕಂಬಾಗಿ, ಶಂಕರ ಚಲವಾದಿ, ಸವಿತಾ ವಗ್ಗರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net