

ಹುಬ್ಬಳ್ಳಿ: ದಿ ಹುಬ್ಬಳ್ಳಿ ಅರ್ಬನ್ ಕೋ-ಆಪ್ ಬ್ಯಾಂಕಿನ 119ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಏರ್ಪಾಟಾಗಿತ್ತು.
ಅಧ್ಯಕ್ಷ ವಿಕ್ರಮ ಶಿರೂರ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25ನೇ ಸಾಲಿಗೆ ಶೇ. 8ರಷ್ಟು ಲಾಭಾಂಶವನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ. ಹೊಸ ಶಾಖೆ ತೆರೆಯುವ ಬಗ್ಗೆ ಹಾಗೂ ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ವಿಸ್ತರಣಾ ಕೌಂಟರ್ ಆರಂಭಿಸಲಾಗುವುದು. ನಮ್ಮ ಬ್ಯಾಂಕಿನ ಧಾರವಾಡ ಶಾಖೆ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆಯ ಅರಟಾಳ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡಿದೆ. ಬ್ಯಾಂಕ್ 500 ಕೊಟಿ ರೂ.ಗೂ ಮಿಕ್ಕಿ ವ್ಯವಹಾರ ಹೊಂದಿದೆ ಎಂದರು.
ಬ್ಯಾಂಕಿನ ಅಡಾವೆ ಪತ್ರಿಕೆ, ಲಾಭ -ಹಾನಿ ಹಾಗೂ ಬ್ಯಾಂಕಿನ ಮುಂಬರುವ ವರ್ಷದ ಅಂದಾಜು ಪತ್ರಿಕೆಯನ್ನು ನಿರ್ದೇಶಕ ಚಂದ್ರಶೇಖರ ಕಮಡೊಳ್ಳಿ ಮಂಡಿಸಿದರು.
ಬ್ಯಾಂಕಿನ ಕನಿಷ್ಠ ಸೇವೆಗಳ ಬಳಕೆ ಬಗ್ಗೆ ನಿರ್ದೇಶಕ ಎಂ.ವಿ. ಸಾವಕಾರ ತಿಳಿಸಿದರು.
ನಿರ್ದೇಶಕಿ ಸ್ಮತಿ ಕೊರ್ಲಹಳ್ಳಿ ನೀತಿ-ಸಂಹಿತೆ ರೂಪಿಸುವುದರ ಬಗ್ಗೆ ವಿವರಿಸಿದರು.
ನಿರ್ದೇಶಕರಾದ ಎ.ಆರ್. ಮನಗೊಳಿ, ವಿ.ಎಲ್. ಉಪ್ಪಾರ, ಎಸ್.ಸಿ. ಕಾರಡಗಿ, ಎಂ.ಬಿ. ಬುರಲಿ, ಪಿ.ಎಸ್.ಕಲಾಲ, ಬಿ.ಎಸ್. ತೆರದಾಳ, ವೃತ್ತಿಪರ ನಿರ್ದೇಶಕ ಕೆ.ಆರ್. ಭಟ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಠಪತಿ ನಿರ್ವಹಿಸಿದರು. ಉಪಾಧ್ಯಕ್ಷ ಗಿರೀಶ ಉಪಾಧ್ಯಾಯ ಸ್ವಾಗತಿಸಿದರು. ನಿರ್ದೇಶಕ ರವೀಂದ್ರ ಬೆಂತೂರ ವಂದಿಸಿದರು.