ಪಾಲಕರ ಶ್ರಮ ಅರಿತು ಸಾಧನೆ ಮಾಡಿ

15Manjari1
Published on

ಮಾಂಜರಿ: ವಿದ್ಯಾರ್ಥಿಗಳು ಪಾಲಕರ ಶ್ರಮವರಿತು ಚೆನ್ನಾಗಿ ಓದಬೇಕು ಹಾಗೂ ಅವರ ಜೀವನ ಅರ್ಥೈಸಿಕೊಂಡು ಸಾಧನೆ ಮಾಡಬೇಕು ಎಂದು ಬಿಸಿಎಂ ಹಾಸ್ಟೆಲ್​ ಮೇಲ್ವಿಚಾರಕ ಬಸವರಾಜ ಹೊನಗೌಡರ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಕೆಎಲ್​ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು. ಚಿಕ್ಕಚಿಕ್ಕ ಕೆಲಸಗಳೇ ಸಾಧನೆಯತ್ತ ಮುನ್ನಡೆಸುತ್ತವೆ. ಅದಕ್ಕೆ ನಿರಂತರ ಪ್ರಯತ್ನ ಅವಶ್ಯ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆರ್​.ಡಿ. ಗಿಜರೆ ಮಾತನಾಡಿ, ಯಾವುದೇ ವಿಷಯ ಓದಿದರೂ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು. ಗುರಿಯೊಂದಿಗೆ ಸಾಗಿದರೆ ಜೀವನ ಉತ್ತಮವಾಗುತ್ತದೆ ಎಂದರು.

ಉಪ ಪ್ರಾಚಾಯೆರ್ ಜ್ಯೋತಿ ತಮ್ಮಗೌಡ ಪ್ರಾಸ್ತಾವಿಕ ಮಾತನಾಡಿದರು. ಸಿ.ಬಿ. ಚೌಗುಲಾ, ಬಿ.ಎಸ್​.ಅಂಬಿ, ವಿ.ಡಿ. ನಾಯಕ, ಎಂ. ಎಸ್​. ಕಾನಡೆ, ಶಿಕ್ಷಕರು ಮತ್ತು ವಿದ್ಯಾರ್ಥಿ ಡಿ.ಎಸ್​. ಬಾಕಳೆ, ಎಸ್​.ಬಿ. ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net