ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

11bhr 1
Published on

ಬಾಳೆಹೊನ್ನೂರು: ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಅಡಗಿದ್ದು ಪಾಲಕರು, ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ದಿವ್ಯಭಾರತಿ ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಮೂರ್ತಿ ಹೇಳಿದರು.

ಪಟ್ಟಣದ ದಿವ್ಯಭಾರತಿ ಮಹಿಳಾ ಮಂಡಳಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ತಮ್ಮಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಬೇಕು. ಸಂಘ ಸಂಸ್ಥೆಗಳ ಪಾಲಕರು ಹಾಗೂ ಶಿಕ್ಷಕರು ಕಾಲಕಾಲಕ್ಕೆ ಉತ್ತಮ ತರಬೇತಿ ನೀಡಿ ಮಕ್ಕಳು ಸಾಧನೆ ಮಾಡುವಂತೆ ನೋಡಿಕೊಳ್ಳಬೇಕು.

ದಿವ್ಯಭಾರತಿ ಮಹಿಳಾ ಮಂಡಳಿಯು ಮಕ್ಕಳ ದಿನಾಚರಣೆ, ರಾಜ್ಯೋತ್ಸವ ಅಂಗವಾಗಿ ಕೆಲವು ಆಯ್ದ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವೇದಿಕೆ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ಮಹಿಳಾ ಮಂಡಳಿಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು.

ಮಹಿಳಾ ಮಂಡಳಿ ಕಾರ್ಯದರ್ಶಿ ವಿದ್ಯಾ ಪೈ, ಖಜಾಂಚಿ ಸವಿತಾ, ಸದಸ್ಯರಾದ ವೈಶಾಲಿ ಕುಡ್ವ, ರಜನಿ ದೇವಯ್ಯ, ಸುಮಿತ್ರಾ, ಕವಿತಾ, ಪ್ರಮೀಳಾ, ನಿಶ್ಚಿತಾ, ಲಿಲ್ಲಿ, ಶೈಲಜಾ, ಕಾಂಚನಾ, ವರ್ಷಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net