

ಮುಂಡಗೋಡ: ಸಾಧನೆ ಮಾಡದೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಅಸಾಧ್ಯ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ತಾಲೂಕಾಡಳಿತ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಗುರುವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಜಯಂತಿ ಆಚರಣೆ ಉದ್ದೇಶ ಮಹಾತ್ಮರು ನಡೆದ ಬಂದ ಹಾದಿ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಮಕ್ಕಳಿಗೆ ತಿಳಿಸಿ ಅವರ ಆದರ್ಶದಂತೆ ಜೀವನ ಅಳವಡಿಸಿಕೊಳ್ಳುವುದಾಗಿದೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್. ಟಿ. ಪಾಟೀಲ ಮಾತನಾಡಿ, ಮಹರ್ಷಿ ವಾಲ್ಮೀಕಿ ಬರೆದ ರಾಮಯಾಣವು ವಿಶ್ವದ ಎಲ್ಲ ಭಾಷೆಗೆ ಭಾಷಾಂತರವಾಗಿದೆ ಎಂದರು.
ಸಮಾಜದ ತಾಲೂಕಾಧ್ಯಕ್ಷ ರಾಘವೇಂದ್ರ ಮಳಗಿಕರ ಮಾತನಾಡಿದರು. ಚಿಂತಕ ಸುರೇಶ ಕಲ್ಲೋಳ್ಳಿ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಶಂಕರ ಗೌಡಿ, ತಾಪಂ ಇಒ ಟಿ. ವೈ.ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ, ಪಪಂ ಉಪಾಧ್ಯಕ್ಷೆ ರಹಿಮಾಭಾನು ಕುಂಕೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಹನುಮಂತ ಆರೇಗೋಪ್ಪ, ಹನುಮಂತ ಭಜಂತ್ರಿ ಎನ್.ಡಿ. ಕಿತ್ತೂರ, ಗಜೇಂದ್ರ ವಾಲ್ಮೀಕಿ, ನಿಂಗಪ್ಪ ತಳವಾರ, ಹಾಲಪ್ಪ ಕೊಡಣ್ಣನವರ, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.