ಸಮಾಜಮುಖಿ ಕೆಲಸಕ್ಕೆ ಮನ್ನಣೆ : ಸಾಹಿತಿ ಮಹಾದೇವ ಬಸರಕೋಡ ಅನಿಸಿಕೆ

GLD29-1
ಗುಳೇದಗುಡ್ಡದಲ್ಲಿ ನಡೆದ ಸ್ವಾತಂತ್ರ‍್ಯ ಯೋಧ ದಿ. ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಸಾಹಿತಿ ಮಹಾದೇವ ಬಸರಕೋಡ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಶಂಕರ ಸಿಂಗದ, ಪಿಇಟಿ ಟ್ರಸ್ಟ್ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಇತರರಿದ್ದರು.
Published on

ಗುಳೇದಗುಡ್ಡ : ಸ್ವಾತಂತ್ರ‍್ಯ ಯೋಧ ದಿ. ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನದ ಸಮಾಜಮುಖಿ ಕಾರ್ಯ ನಿಜಕ್ಕೂ ಪ್ರಶಂಸನೀಯ. ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಮಕ್ಕಳಲ್ಲಿ ಯೋಧ ಮುದಕಪ್ಪ ಕಲಬುರ್ಗಿ ಅವರ ಆದರ್ಶ ಜೀವನ ಹಾಗೂ ದೇಶಾಭಿಮಾನ ಬೆಳೆಸುತ್ತಿರುವುದು ಶ್ವಾಘನೀಯ ಎಂದು ಸಾಹಿತಿ ಮಹಾದೇವ ಬಸರಕೋಡ ಹೇಳಿದರು.

ಸ್ವಾತಂತ್ರ‍್ಯ ಯೋಧ ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುದಕಪ್ಪ ಕಲಬುರ್ಗಿ ಪ್ರತಿಷ್ಠಾನ ಪ್ರೋತ್ಸಾಹಿಸುವ ಈ ಸಮಾಜಮುಖಿ ಹಾಗೂ ದೇಶಾಭಿಮಾನ ಬೆಳೆಸುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಕೂಡಾ ನಿರಂತರ ಅಧ್ಯಯನ, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿ ಯೋಧರ ಆದರ್ಶ ಮಾರ್ಗದಲ್ಲಿ ಸಾಗಬೇಕೆಂದರು.

ಪಿಇಟಿ ಟ್ರಸ್ಟ್ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಯೋಧ ಶ್ರೀಶೈಲ ಗೋಲಾಯಿ, ಪ್ರಾಚಾರ್ಯ ಡಾ. ಎನ್.ವೈ. ಬಡನ್ನವರ ಮಾತನಾಡಿದರು.

75 ವಸಂತ ಪೂರೈಸಿದ ಸಂಗನಬಸಪ್ಪ ಚಿಂದಿ, ಸಿ.ಎಂ. ಚಿಂದಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶಂಕರ ಸಿಂಗದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ನಾಯನೇಗಲಿ, ಬಸವರಾಜ ಹಡಗಲಿ, ಈರಣ್ಣ ಪಟ್ಟಣಶೆಟ್ಟಿ, ನೀಲಕಂಠಯ್ಯ ಸಿಂದಗಿಮಠ, ಬಿ.ಎ. ತೆಲಸಂಗ, ಚನ್ನಬಸಪ್ಪ ಕಲಬುರ್ಗಿ, ಗುರುಸಿದ್ದಪ್ಪ ಕಲಬುರ್ಗಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net