ದೇವರ ದಾಸಿಮಯ್ಯನವರ ವಚನ ಪಠಿಸಿ

h16-devanga
Published on

ಹುಬ್ಬಳ್ಳಿ: ಆದ್ಯ ವಚನಕಾರ ದೇವರ ದಾಸಿಮಯ್ಯನವರ 1045ನೇ ಜಯಂತಿಯನ್ನು ನಗರದ ದೇವಾಂಗ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶ್ರೀ ದಯಾನಂದಪುರಿ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ದೇವಾಂಗ ಸಮುದಾಯದ ಮಕ್ಕಳಿಗೆ ಮತ್ತು ಪಾಲಕರಿಗೆ ದೇವರ ದಾಸಿಮಯ್ಯನವರ ವಚನಗಳನ್ನು ಪಠಿಸಲು ಸಲಹೆ ನೀಡಿದರು.
ಶ್ರೀ ಬನಶ್ರೀ ಮಹಿಳಾ ಮಂಡಳ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮನೋರಂಜನೆ ಹಾಗೂ ವಚನ ಸ್ಪರ್ಧೆ ಜರುಗಿತು. ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಡಾ. ಹುಲಿಗೆಮ್ಮ ಪೋಸಾ, ಅನುರಾಧ ಕೊಳ್ಳಿ, ಗಾಯತ್ರಿ ಚೋಳಿನ, ವಿಜಯಾ ಜಂತ್ಲಿ, ಸರೋಜಾ ವೆಂಕಟರಮಣ ಚಿಟ್ಟಾ, ಜಯಮ್ಮ ಬಾರಿಗಿಡದ, ಮಮತಾ ಪಾಟೀಲ, ಮಂಜುಳಾ ಮಂಗಳೂರ, ಸಂಕಣ್ಣ ಹೊನ್ನಳ್ಳಿ, ರಾಮಚಂದ್ರ ಕಂಗೂರಿ, ಜಗದೀಶ ಸೂಳಿಕೇರಿ, ಶಿವಾನಂದ ಕೊಳದೂರ, ಮಂಜುನಾಥ ಚಿಂತಗಿಂಜಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net