ಗಂಗಾಪುರಾಣ ನಿತ್ಯ ಪಾರಾಯಣ ಮಾಡಿ

Published on

ಕಂಪ್ಲಿ: ಅಂಬಿಗರ ಚೌಡಯ್ಯ ಅವರ ತತ್ವಾದರ್ಶಗಳನ್ನು ಪಾಲಿಸಿದರೆ ಲೌಕಿಕ ಜಂಜಾಟಗಳಿಂದ ಪಾರಾಗಲು ಸಾಧ್ಯ ಎಂದು ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಅಧ್ಯಕ್ಷ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ರಾಮಸಾಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಯುವಕರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯಕ್ರದಲ್ಲಿ ಮಾತನಾಡಿದರು. ಮಹಾತ್ಮರ ವೃತ್ತ, ಪ್ರತಿಮೆಗಳ ಮೂಲಕ ತತ್ವಾದರ್ಶಗಳು ಪ್ರೇರಣೆಯಾಗುತ್ತವೆ. ಚೌಡಯ್ಯ ಅವರ ವಚನಗಳು ಹಾಗೂ ಗಂಗಾಪುರಾಣ ನಿತ್ಯ ಪಾರಾಯಣ ಮಾಡಬೇಕು. ವರ್ಷಕ್ಕೆ ಒಮ್ಮೆಯಾದರೂ ಗಂಗಾಪೀಠಕ್ಕೆ ಭೇಡಿ ನೀಡಬೇಕು. ಗಂಗಾಮತಸ್ಥರನ್ನು ಎಸ್ಟಿ ಮೀಸಲಾತಿಗೆ ಸೇರಿಸುವಂತೆ 5 ದಶಕಗಳಿಂದ ಹೋರಾಟ ಮಾಡಿದರೂ ಪ್ರತಿಫಲ ದೊರೆತಿಲ್ಲ. ಆದ್ದರಿಂದ ಬೃಹತ್ ಹೋರಾಟ ಕೈಗೊಳ್ಳುವುದಾಗಿ ಹೇಳಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸ್ಥಳ ನೀಡಿದರೆ ಗಂಗಾಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸುತ್ತೇನೆ. ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಲು ಮಾಡುತ್ತಿರುವ ಹೋರಾಟಕ್ಕೆ ಸಹಕರಿಸುತ್ತೇನೆ. ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ದತ್ತಾತ್ರೇಯ ರೆಡ್ಡಿ, ತಳವಾರ್ ರಾಮಚಂದ್ರಪ್ಪ, ಎಚ್.ಶಿವಶಂಕರಗೌಡ, ಎಚ್.ಜಗನ್ನಾಥ ಗೌಡ, ಬಿ.ನಾರಾಯಣಪ್ಪ, ಭಟ್ಟ ಪ್ರಸಾದ್, ಕೆ.ಬಿ.ವಾಸುಕುಮಾರ್, ಮೆಟ್ರಿ ಗಿರೀಶ್, ಆರ್.ಎಂ.ರಾಮಯ್ಯ, ಎಲಿಗಾರ ನಾಗರಾಜ, ಬಿ.ಸಿದ್ದಪ್ಪ, ಕೆ.ಮನೋಹರ, ಬಾರಕೀರ ಗಂಗಾಧರ, ಸುಗುಂದಿ ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net