ಸಂವಿಧಾನದ ಪೀಠಿಕೆ ಪಠಣ

TKE demo
ಬೆಟ್ಟದಹಳ್ಳಿಯಲ್ಲಿ ಮಾನವ ಸರಪಳಿ ರಚನೆ.
Published on

ರೀಕೆರೆ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮಾನವ ಸರಪಳಿ ರಚಿಸಲಾಯಿತು.

ಕಡೂರು ಕಡೆಯಿಂದ ಮಾನವ ಸರಪಳಿ ರಚಿಸಿ ತಾಲೂಕಿನ ಕೊರಟಿಕೆರೆಯಿಂದ ಭದ್ರಾವತಿಗೆ ಹೊಂದಿಕೊಂಡ ಎಂ.ಸಿ.ಹಳ್ಳಿ ಗ್ರಾಮದವರೆಗಿನ 29 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಬದಿ ವಿವಿಧ ಶಾಲೆಗಳ ಮಕ್ಕಳು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾನವ ಸರಪಳಿ ರಚಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿಶ್ವವಿಜೇತ ಮೆಹತಾ ಇತರ ಇಲಾಖೆ ಅಧಿಕಾರಿಗಳು ಸಂವಿಧಾನ ಪೀಠಿಕೆ ಪಠಿಸಿ ಸಮಾಜದಲ್ಲಿ ಸಮಾನತೆ, ಏಕತೆ ಮೂಡಿಸುವ ಪ್ರತಿಜ್ಞಾವಿಧಿ ಬೋಧಿಸಿದರು.
ತಾಲೂಕಿನಲ್ಲಿ 29 ಕಿ.ಮೀ ಉದ್ದದ ಮಾನವ ಸರಪಳಿ ರಚನೆಯಲ್ಲಿ ಪಟ್ಟಣ, ಕೊರಟಿಕೆರೆ, ಕುಡ್ಲೂರು, ಕೋರನಹಳ್ಳಿ, ಬೆಟ್ಟದಹಳ್ಳಿ, ಬೇಲೇನಹಳ್ಳಿ, ಎಂ.ಸಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಜನರು, ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಎನ್.ಆರ್.ಪುರದಿಂದ ಬಸ್‌ನಲ್ಲಿ ನೂರಾರು ಜನ ಆಗಮಿಸಿದ್ದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ವಿವಿಧ ಶಾಲೆಗಳ ಮಕ್ಕಳು ಮಹನೀಯರ ವೇಷ ಧರಿಸಿ ಪ್ರಜಾಪ್ರಭುತ್ವ ದಿನಾಚರಣೆಗೆ ಮೆರುಗು ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಎಲ್ಲರ ಮನ ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net