ಕಂಪ್ಲಿಯಲ್ಲಿ ವಾಸವಿ ಚರಿತೆ ಪಾರಾಯಣ

ಕಂಪ್ಲಿಯ ಶ್ರೀಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರು ವಾಸವಿ ಚರಿತೆ ಪಾರಾಯಣ ಮಾಡಿದರು. ಪ್ರಮುಖರಾದ ವೈ.ಪದ್ಮಾರೇಖಾ ಮಂಜುನಾಥ, ಕೆ.ಇ.ವಾಣಿಶ್ರೀ ಈಶ್ವರಯ್ಯ, ಡಿ.ಶಿಲ್ಪಾ ಮಂಜೇಶ ಇತರರಿದ್ದರು.
ಕಂಪ್ಲಿಯ ಶ್ರೀಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರು ವಾಸವಿ ಚರಿತೆ ಪಾರಾಯಣ ಮಾಡಿದರು. ಪ್ರಮುಖರಾದ ವೈ.ಪದ್ಮಾರೇಖಾ ಮಂಜುನಾಥ, ಕೆ.ಇ.ವಾಣಿಶ್ರೀ ಈಶ್ವರಯ್ಯ, ಡಿ.ಶಿಲ್ಪಾ ಮಂಜೇಶ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ವಿನಾಯಕನಗರದ ಶ್ರೀಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶುಕ್ರವಾರ ಆರ್ಯವೈಶ್ಯ ಸಮುದಾಯದಿಂದ ಶ್ರೀನಗರೇಶ್ವರ ಮತ್ತು ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಸುಗಮವಾಗಿ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ ಸಮುದಾಯದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ನಂತರ ವಾಸವಿ ಚರಿತೆ ಪಾರಾಯಣ, ಸಾಮೂಹಿಕ ಭಜನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಾಸವಿ ಚರಿತೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರಮುಖರಾದ ವೈ.ಪದ್ಮಾರೇಖಾ ಮಂಜುನಾಥ, ಕೆ.ಇ.ವಾಣಿಶ್ರೀ ಈಶ್ವರಯ್ಯ, ಡಿ.ಶಿಲ್ಪಾ ಮಂಜೇಶ, ಟಿ.ರಾಧಾಬಾಯಿ ಶ್ರೀನಿವಾಸ್, ಎಂ.ರಾಧಾ ಮುರುಳಿಧರ, ಎಂ.ಪದ್ಮಜಾ, ಈ.ಭವಾನಿ ಕೃಷ್ಣಮೂರ್ತಿ, ಪಿ.ರಶ್ಮಿ ಗಿರಿನಾಥ, ಡಿ.ವಿ.ಸುವರ್ಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net