ರಾಮರಕ್ಷಾ ಸ್ತೋತ್ರ ಪಠಣ

amargol
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮರಗೋಳ ಎಪಿಎಂಸಿ ಕರ್ನಾಟಕ ವೃತ್ತದಲ್ಲಿ ಜ. 22ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಹನುಮಾನ ಚಾಲೀಸ್ ಹಾಗೂ ರಾಮರಕ್ಷಾ ಸ್ತೋತ್ರ ಪಠಣಕ್ಕೆ ವ್ಯವಸ್ಥೆ ಮಾಡಲಾಗಿದೆ. 50-60 ದಂಪತಿಗಳು ಪಠಣದಲ್ಲಿ ಭಾಗಿಯಾಗುವರು. ಅಯೋಧ್ಯೆಯಲ್ಲಿ ಜರುಗುವ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆಗೆ ಎಲ್​ಇಡಿ ಪರದೆ ಅಳವಡಿಸಲಾಗುವುದು. ಬಳಿಕ ಶ್ರೀರಾಮ ದೇವರ ಪೂಜೆ ಹಾಗೂ ಅನ್ನಸಂತರ್ಪಣೆ ಇಟ್ಟುಕೊಳ್ಳಲಾಗಿದೆ ಎಂದರು.

ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಗಣ್ಯ ವ್ಯಾಪಾರಸ್ಥರಾದ ಜಿ.ಎಂ. ಚಿಕ್ಕಮಠ, ಬಾಬಣ್ಣ ಬೋರಟ್ಟಿ, ರಮೇಶ ಬಾಫಣಾ, ಎಪಿಎಂಸಿ ಮಾಜಿ ಸದಸ್ಯ ಚನ್ನಬಸಪ್ಪ ಹೊಸಮನಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ ಕಠಾರೆ, ಕಾರ್ಯದರ್ಶಿ ಅರ್ಜುನ ಅಗರ್ವಾಲ, ಸಹ ಕಾರ್ಯದರ್ಶಿ ಈರಣ್ಣ ಕೆಸರಪ್ಪನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net