

ಲಕ್ಷೆ್ಮೕಶ್ವರ: ಪವಿತ್ರ ಶ್ರಾವಣ ಮಾಸದ ಕೊನೆಯ ಶನಿವಾರ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವಾರಕರಿ ಹಾಗೂ ಬಾಂಧವರಿಂದ ಭಗವದ್ಗೀತಾ ಶ್ರೀ ಜ್ಞಾನೇಶ್ವರೀ ಗ್ರಂಥ ಸಾಮೂಹಿಕ ಪಾರಾಯಣ, ನಾಮಜಪ, ಭಜನೆ ಕಾರ್ಯಕ್ರಮ ನಡೆಯಿತು.
ಹ.ಭ.ಪ ಸತೀಶ ಮಾಂಡ್ರೆ ಅವರ ನೇತೃತ್ವದಲ್ಲಿ ಪಾರಾಯಣ ನಾಮಜಪಯಜ್ಞ ಭಜನೆ ಸೇವೆ ಅಚಚ್ಚುಕಟ್ಟಾಗಿ ನಡೆಯಿತು.
ನಿವೃತ್ತಿ ತಾಂದಳೆ, ಸಂತೋಷ ಸರ್ವದೆ, ಜ್ಞಾನೋಬಾ ಬೋಮಲೆ, ಸಂಜೀವ, ಉದಯ ಹಾಗೂ ಮಹಿಳಾ ಮಂಡಳಿಯ ರುಕುಮಾಬಾಯಿ ರಂಪೂರೆ, ರಮೇಶ ಬಾವಿಕಟ್ಟಿಯವರ ಇತರರು ಇದ್ದರು.