ಶಾಸಕರಿಂದ ಅಹವಾಲು ಸ್ವೀಕಾರ

34
Published on

ಮೈಸೂರು: ವಾರ್ಡ್ ನಂ. 2ರ ಮಂಚೇಗೌಡನಕೊಪ್ಪಲು ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಭಾನುವಾರ ಮಂಚೇಗೌಡನಕೊಪ್ಪಲು ಬೂಪಯ್ಯನ ಛತ್ರದ ಪಕ್ಕದ ಆವರಣದಲ್ಲಿ ನೆರವೇರಿತು.

ಶಾಸಕ ಕೆ.ಹರೀಶ್‌ಗೌಡ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಖಾತೆ, ಕಂದಾಯ, ಪಡಿತರ, ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿದಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಎಲ್ಲ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾದು, ಮುಖಂಡರಾದ ಕೃಷ್ಣ, ಮಹದೇವಪ್ಪ, ರವಿ ಮಂಚೇಗೌಡನಕೊಪ್ಪಲು, ಪಟೇಲ್ ಗೋವಿಂದರಾಜು, ಶ್ರೀಧರ್, ಮೂರ್ತಿ, ಕೆಂಪರಾಜು, ಮಹದೇವಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net