

ಮೈಸೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬoಧ ಅಕ್ರಮವಾಗಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ, ವಿತರಣೆ ಇನ್ನಿತರೆ ಅಬಕಾರಿ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು ಅಥವಾ ಮಾಹಿತಿಗಳನ್ನು ಸ್ವೀಕರಿಸಲಾಗುತ್ತದೆ. ಕೂಡಲೇ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಕಛೇರಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆ ಪ್ರಕ್ರಿಯೆ ಮುಗಿಯುವವರೆವಿಗೂ ಯಾವುದೇ ದೂರು ಅಥವಾ ಮಾಹಿತಿಗಳು ಕಂಡುಬoದಲ್ಲಿ ಅಬಕಾರಿ ಇಲಾಖೆಯ ದೂ.ಸಂ: 0821-2340269 ಮತ್ತು ಮೊಬೈಲ್ ನಂ: 9845382905 ಗೆ ಕರೆ ಮಾಡಬಹುದು ಎಂದು ಮೈಸೂರು ವಿಭಾಗದ ಅಬಕಾರಿ ಮತ್ತು ಜಂಟಿ(ಜಾರಿ ಮತ್ತು ತನಿಖೆ) ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.