

ಕೋಹಳ್ಳಿ: ಗ್ರಾಮದ ಅಥಣಿ ಕೊಟ್ಟಲಗಿ ರಸ್ತೆಯಲ್ಲಿ ಮಹಿಳೆಯರಿಗಾಗಿ ನಿರ್ಮಿಸಿದ್ದ ಸರ್ಕಾರಿ ಸಾರ್ವಜನಿಕ ಶೌಚಗೃಹ ಧ್ವಂಸಗೊಳಿಸಿದ್ದು, ಮರು ನಿರ್ಮಾಣ ಮಾಡಲು ಆಗ್ರಹಿಸಿ ಭಾನುವಾರ ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿಗೆ ಸ್ಥಳೀಯ ಮಹಿಳೆಯರು ಮನವಿ ಸಲ್ಲಿಸಿದರು.
ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಆದಷ್ಟು ಬೇಗ ಶೌಚಗೃಹ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಭೀಮವಾದ ದಲಿತ ಸಂಘರ್ಷ ಸಮತಿ ರಾಜ್ಯ ಸಮಿತಿಯ ಸದಸ್ಯ ಚಿದಾನಂದ ತಳಕೇರಿ, ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಮುಖಂಡ ಗಜಾನನ ಮಂಗಸೂಳಿ, ಸುನೀತಾ ಐಹೊಳೆ, ಗ್ರಾಪಂ ಉಪಾಧ್ಯಕ್ಷ ಮಲಗೌಡ ಪಾಟೀಲ, ತುಕಾರಾಮ ದೇವಖಾತೆ, ಸಂಗಪ್ಪ ಕರಿಗಾರ, ರವಿ ಸಿಂಗೆ, ಭರತ ಬಂಡಗರ, ಮೈಬೂಬ ಪಡಸಲಗಿ, ಲಕ್ಷ್ಮಣ ಉಮರಾಣಿ, ಮಹಾದೇವ ಕನ್ನಾಳ, ಶಂಕರ ಗುರಪ್ಪಗೋಳ, ಸುರೇಶ ಸಿಂಗೆ, ಸುಖದೇವ ಪುಂಡಿಪಲ್ಲೆ, ಅನುಸೂಯಾ ಸಿಂಗೆ, ದಿಲಶಾದ ಪಡಸಲಗಿ, ಪಾರ್ವತಿ ತಳಕೇರಿ, ವಿದ್ಯಾ ಸಿಂಗೆ, ಸರಸವ್ವ ಕನ್ನಾಳ, ರೂಪಾ ಕನ್ನಾಳ, ನಿಂಬೆವ್ವ ತಳಕೇರಿ, ಲಲಿತಾ ಕನ್ನಾಳ ಇತರರಿದ್ದರು.