ತಹಸೀಲ್ದಾರ್ ಆಗಿ ಮರು ನೇಮಕಗೊಂಡು

ಫೋಟೋ ಶೀರ್ಷಿಕೆ 13 ಸಿಆರ್_ಪಿ-3ಎ.
ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಲಿಫ್ಟ್ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್ ಪರೀಕ್ಷಿಸಿದರು.
Published on

ಚನ್ನರಾಯಪಟ್ಟಣ: ಅವಧಿಗೂ ಮುನ್ನಾ ವರ್ಗಾವಣೆಗೊಂಡಿದ್ದ ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್ ಅವರು ತಮ್ಮ ವರ್ಗಾವಣೆ ರದ್ಧತಿಗಾಗಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಧೀಕರಣದ ಮೊರೆ ಹೋಗಿ ಆದೇಶ ಪಡೆಯುವಲ್ಲಿ ಸಫಲವಾಗಿದ್ದು, ತಹಸೀಲ್ದಾರ್ ಆಗಿ ಮರು ನೇಮಕಗೊಂಡು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮಾದವರೊಂದಿಗೆ ಮಾತನಾಡಿದ ಅವರು, ಅವಧಿಗೂ ಮುನ್ನವೇ ಸರ್ಕಾರ ತಮ್ಮನ್ನು ದಿಢೀರ್ ವರ್ಗಾವಣೆಗೊಳಸಿದ್ದರ ವಿರುದ್ಧ ಕೆಎಟಿ ಮೆಟ್ಟಿಲು ಏರಿ ಜಯಸಿಕ್ಕಿದೆ. ಆದರ ಅನ್ವಯ ಮತ್ತೆ ಅಧಿಕಾರ ವಹಿಸಿಕೊಂಡಿದ್ದು, ತಾಲೂಕು ಕಚೇರಿಯಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ಸೇರಿ ಸಾರ್ವಜನಿಕರ ಅಗತ್ಯ ಕೆಲಸಗಳನ್ನು ಮಾಡಿಕೊಡಲಾಗುವುದು. ಇದೀಗ ಇ-ಕಚೇರಿ ತೆರೆದಿದ್ದು, ಸಾರ್ವಜನಿಕರು ತಾವು ಕೊಟ್ಟ ಅರ್ಜಿ ಯಾವ ಹಂತದಲ್ಲಿದೆ, ಎಷ್ಟು ದಿನಗಳಲ್ಲಿ ವಿಲೇವಾರಿ ಆಗಲಿದೆ ಎಂಬ ಮಾಹಿತಿ ತಮ್ಮ ಮೊಬೈಲ್‌ಗೆ ಸಂದೇಶ ತಲುಪುತ್ತದೆ. ಇದಕ್ಕಾಗಿ ಶಾಸಕರು ಅಗತ್ಯ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಒದಗಿಸಿರುವುದು ಸ್ವಾಗತಾರ್ಹ ಎಂದರು.

ತಾಲೂಕು ಕಚೇರಿಯಲ್ಲಿ ಸ್ಥಗಿತಗೊಂಡಿದ್ದ ಲಿಫ್ಟ್ ವ್ಯವಸ್ಥೆಯನ್ನು ಪುನರಾರಂಭಿಸಲಾಗಿದೆ. ಸಾಮಾಜಿಕ ಭದ್ರತೆಯ ಮಾಸಾಶನ, ಖಾತೆ ಬದಲಾವಣೆ, ಪೌತಿ ಖಾತೆ ಸೇರಿ ಇತರ ಕೆಲಸಗಳ ಇತ್ಯರ್ಥಕ್ಕಾಗಿ ಸೆ.22ರಂದು ಹಿರಿಸಾವೆ ಹೋಬಳಿಯಲ್ಲಿ ಕಂದಾಯ ಆದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಬರಗಾಲ ಘೋಷಣೆಗೆ ಸನ್ನಿಹಿತವಾಗಿದ್ದು, ಈಗಾಗಲೇ ತಾಲೂಕಿನ ಶೇ.10ರಷ್ಟು ಹಳ್ಳಿಗಳನ್ನು ಗುರ್ತಿಸಿ ಬರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿದೆ. ಕುಡಿಯುವ ನೀರಿನ ಬವಣೆ ಕುಂಡುಬಂದಿಲ್ಲ, ಹಾಗೇನಾದರೂ ಸಮಸ್ಯೆ ಕಂಡುಬಂದಲ್ಲಿ ಪ್ರಕೃತಿ ವಿಕೋಪದಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಸಮಾಜ ಕಲ್ಯಾಣಾಧಿಕಾರಿ ಶಂಕರ್‌ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net