ತಂದೆ, ತಾಯಿ ತ್ಯಾಗ ಅರಿತು ಜೀವನ ರೂಪಿಸಿಕೊಳ್ಳಿ

ಇಳಕಲ್ಲ ಎಸ್‌ವಿಎಂ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಸಮಾರಂಭದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ರಾಮನಗೌಡ ಸಂದಿಮನಿ ಅವರನ್ನು ಸತ್ಕರಿಸಲಾಯಿತು. ಸಂಘದ ಉಪಾಧ್ಯಕ್ಷ ಸಿ. ಪಿ. ಸಾಲಿಮಠ, ಚೇರ್ಮನ್ ಮಲ್ಲಪ್ಪ ಹರವಿ, ಆಡಳಿತಾಧಿಕಾರಿ ಆರ್. ಎಂ. ಪಾಟೀಲ, ಆಡಳಿತ ಮಂಡಳಿ ಸದಸ್ಯ ಶರಣಪ್ಪ ಅಕ್ಕಿ ಇದ್ದರು.

Published on

ಇಳಕಲ್ಲ (ಗ್ರಾ): ವಿದ್ಯಾರ್ಥಿಗಳು ಸಂಸ್ಕಾರದೊಂದಿಗೆ ಶಿಕ್ಷಣವಂತರಾಗಿ ಹೊರಹೊಮ್ಮಬೇಕೆಂದು ನಿವೃತ್ತ ಕನ್ನಡ ಉಪನ್ಯಾಸಕ ರಾಮನಗೌಡ ಸಂದಿಮನಿ ಹೇಳಿದರು.

ಸ್ಥಳೀಯ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್‌ವಿಎಂ ಪಪೂ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತಂದೆ ತಾಯಿಗಳು ತುತ್ತಿನ ಚೀಲ ತುಂಬಿಕೊಳ್ಳುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆವರು ಸುರಿಸುತ್ತಾರೆ. ಅವರ ತ್ಯಾಗ ಅರಿತು ನಿಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ಸಿ. ಪಿ. ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಚೇರ್ಮನ್ ಮಲ್ಲಪ್ಪ ಹರವಿ, ಆಡಳಿತಾಧಿಕಾರಿ ಆರ್. ಎಂ. ಪಾಟೀಲ, ಆಡಳಿತ ಮಂಡಳಿ ಸದಸ್ಯ ಶರಣಪ್ಪ ಅಕ್ಕಿ ವಿದ್ಯಾರ್ಥಿ ಪ್ರತಿನಿಧಿ ಶಿವು ತಳಗೇರಿ ಉಪಸ್ಥಿತರಿದ್ದರು.

ಪೂರ್ಣಿಮಾ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್. ವಿ. ಕಂಬಿ ಸ್ವಾಗತಿಸಿದರು. ರವಿ ಧೋತ್ರೆ ಪರಿಚಯಿಸಿದರು. ಎ. ಬಿ. ರಜಪೂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ. ಎಲ್. ಶಾಸಲ ವಂದಿಸಿದರು. ವಿ. ಎಂ. ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net