ಮಾರುಕಟ್ಟೆ ವ್ಯವಹಾರ ಅರಿತುಕೊಳ್ಳಿ

25MDG3
Published on

ಮುಂಡರಗಿ: ಜಗತ್ತಿನಲ್ಲಿ ಮಾರುಕಟ್ಟೆಯು ಇಂದು ಎಲ್ಲ ರಂಗಗಳಲ್ಲಿ ತುಂಬಾ ವ್ಯಾಪಕವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಮಾರುಕಟ್ಟೆ ವ್ಯವಹಾರಗಳನ್ನು ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಯೋಜನಾ ಮಂಡಳಿ ಅಧಿಕಾರೇತರ ಸದಸ್ಯ ಡಾ. ಬಿ.ಜಿ. ಜವಳಿ ಹೇಳಿದರು.

ಪಟ್ಟಣದ ಕೆ.ಆರ್. ಬೆಲ್ಲದ ಕಾಲೇಜ್​ನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ಮೈಕ್ರೋ ಟೀಚಿಂಗ್ ಸ್ಕಿಲ್ಸ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸಂವಹನ ಕಲೆ, ಇಂಗ್ಲಿಷ್ ಭಾಷೆ ಜ್ಞಾನ, ಸತತ ಅಧ್ಯಯನದಲ್ಲಿ ತೊಡಗಿದವರಿಗೆ ಸಾಕಷ್ಟು ಉದ್ಯೋಗಾವಕಾಶ ದೊರೆಯುತ್ತವೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು ಎಂದರು.

ಪ್ರಾಚಾರ್ಯ ಡಾ. ಡಿ.ಸಿ. ಮಠದ ಮಾತನಾಡಿ, ಇಂದು ಒಂದು ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಅಧ್ಯಯನಶೀಲರಿಗೆ ಮಾತ್ರ ಸರ್ಕಾರಿ ಹುದ್ದೆ ದೊರೆಯುವಂತಾಗಿದೆ ಎಂದರು.

ಜಗದ್ಗುರು ಅನ್ನದಾನೀಶ್ವರ ಕಾಲೇಜ್ ಪ್ರಾಚಾರ್ಯ ಸಿ.ಎಸ್. ಅರಸನಾಳ, ಪತ್ರಕರ್ತ ಕಾಶೀನಾಥ ಬಿಳಿಮಗ್ಗದ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಕಲಿಕೆಯಲ್ಲಿ ತೋರುವ ಆಸಕ್ತಿಯನ್ನು ತಮ್ಮ ಪಠ್ಯದ ಅಧ್ಯಯನದಲ್ಲಿ ತೋರಿಸಬೇಕು. ಪಠ್ಯಗಳ ಜೊತೆಗೆ ಬೇರೆ ವಿಷಯಗಳನ್ನು ಅಧ್ಯಯನ ಮಾಡಬೇಕು ಎಂದರು.

ಡಾ. ಆರ್.ಎಚ್. ಜಂಗಣವಾರಿ, ಅಶೋಕ ಬನ್ನಿಕೊಪ್ಪ, ಡಾ. ವನಜಾಕ್ಷಿ ಭರಮಗೌಡರ, ಕುಮಾರ ಕಲ್ಮಠ, ಶರಣಪ್ಪ ಕಲ್ಗುಡಿ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net