

ಸಿಂಧನೂರು: ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಪಿಐಎಂಎಲ್ ಲಿಬರೇಷನ್‌ನಿಂದ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಬೋಧನೆ ಮಾಡಿ, ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ಪಕ್ಷದ ಜಿಲ್ಲಾ ಅಧ್ಯಕ್ಷ ನಾಗರಾಜ ಪೂಜಾರ್ ಮಾತನಾಡಿ, ಸಂವಿಧಾನದಲ್ಲಿನ ಜಾತ್ಯತೀತ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಭಾರತದ ಐಕ್ಯತೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸಿದೆ.
ವಿಧಾನ ಅಪಮಾನಗೊಳಿಸುವುದನ್ನು ತಡೆಯಬೇಕಿದೆ. ಪೀಠಿಕೆಯಲ್ಲಿರುವ ಸಾರ್ವಭೌಮ, ಸಾಮಾಜಿಕ, ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಗಣರಾಜ್ಯವಾಗಿ ನಮಗೆ ನಾವೇ ಮಾಡಿಕೊಂಡಿರುವ ಪ್ರತಿಜ್ಞೆ ಸಾಕಾರಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪಕ್ಷದ ಸದಸ್ಯರಾದ ಕಾಸಿಂಸಾಬ್, ಶರಣೇಗೌಡ, ನರೇಶ, ಮಹಮ್ಮದ್, ಬಸವರಾಜ, ಶರಣಪ್ಪ ಇತರರಿದ್ದರು.