ನೈಜ ಚಿತ್ರಣ ಬಿಚ್ಚಿಡುವ ಪ್ರಯತ್ನ

JUN 25-HRP-01
ಹರಪನಹಳ್ಳಿಯಲ್ಲಿ ಆಯೋಜಿಸಿದ್ದ ‘ಕರಾಳ ದಿನಗಳ 50 ವರ್ಷದ ವಿಮರ್ಶೆ’ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ರಾಜ್ಯ ಉತ್ತರ ಪ್ರಾಂತ ಶಿಕ್ಷಕರ ಸಂಯೋಜಕ ಜಯಣ್ಣರನ್ನು ಬಿಜೆಪಿ ಮಂಡಲದಿಂದ ಸನ್ಮಾನಿಸಲಾಯಿತು. ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ, ಪ್ರಮುಖರಾದ ಆರುಂಡಿ ನಾಗರಾಜ್, ಬಾಗಳಿ ಕೊಟ್ರೇಶಪ್ಪ, ಎಸ್.ಪಿ.ಲಿಂಬ್ಯನಾಯ್ಕ, ಕಣವಿಹಳ್ಳಿ ಮಂಜುನಾಥ, ಎಲ್.ಮಂಜ್ಯನಾಯ್ಕ ಇತರರಿದ್ದರು.
Published on

ಹರಪನಹಳ್ಳಿ: ಅತ್ಯಂತ ಅವಶ್ಯ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಸರಿಯಾದ ಕ್ರಮವಾದರೂ ನಿಜವಾದ ಚಿತ್ರಣ ಮುಚ್ಚಿಟ್ಟು ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ ಹೇರಿಕೆ ಕರಾಳ ದಿನವಷ್ಟೇ ಅಲ್ಲ ದೇಶದ ದುರಂತದ ದಿನಗಳಾಗಿವೆ ಎಂದು ಆರ್‌ಎಸ್‌ಎಸ್ ರಾಜ್ಯ ಉತ್ತರ ಪ್ರಾಂತ ಶಿಕ್ಷಕರ ಸಂಯೋಜಕ ಜಯಣ್ಣ ಹೇಳಿದರು.

ಪಟ್ಟಣದ ಎಸ್‌ಕೆಎಸ್ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಹಾಗೂ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50ನೇ ವರ್ಷ ವಿಮರ್ಶೆ’ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಅಂಬೇಡ್ಕರ್ ಅವರ ಆಶೋತ್ತರಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಸರ್ಕಾರ ಇತಿಹಾಸದ ನೈಜ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡುತ್ತಿದೆ. ದೇಶದ ರಕ್ಷಣೆ, ಭದ್ರತೆಗಾಗಿ ಜಾರಿಯಾಗಬೇಕಿದ್ದ ತುರ್ತು ಪರಿಸ್ಥಿತಿಯನ್ನು ಸಂವಿಧಾನಕ್ಕೆ ವಿರದ್ಧವಾಗಿ 1975ರಲ್ಲಿ ಪ್ರಧಾನಿ ಇಂದಿರಾಗಾಂಧಿ ಜೈಲು ಪಾಲಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಜಾರಿಗೊಳಿಸಿದರು ಎಂದು ದೂರಿದರು.

ಈ ಪರಿಸ್ಥಿತಿಯಲ್ಲಿ ಸಾಕಷ್ಟು ರಾಜಕಾರಣಿಗಳು, ಹೋರಾಟಗಾರರು, ಸಂಘಟನೆಗಳ ಪದಾಧಿಕಾರಿಗಳಿಗೆ ಹಿಂಸೆ ನೀಡಲಾಯಿತು. ಹುತಾತ್ಮರಾದ ದೇಶಭಕ್ತರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಾದಂತಹ ದಿನವಾಗಿದೆ. ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ದೊರಕಿಲ್ಲ ಉಗ್ರ ಹೋರಾಟಗಾರರಿಂದಲೂ ದೊರಕಿದೆ ಎನ್ನುವುದನ್ನು ಮರೆಯುವಂತಿಲ್ಲ. ಮುಂದಿನ ಪೀಳಿಗೆಗೆ ನೈಜ ಇತಿಹಾಸ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಲೇಬೇಕಾಗಿದೆ ಎಂದರು.

ಪ್ರಮುಖರಾದ ಓಂಕಾರ್ ಗೌಡ, ಕುಸುಮಾ ಜಗದೀಶ್, ಸ್ವಪ್ನಾ ಮಲ್ಲಿಕಾರ್ಜುನ್, ಚನ್ನನಗೌಡ, ವೆಂಕಟೇಶ್ ನಾಯ್ಕ, ವೀರೇಶ್ ಶೆಟ್ಟಿ, ಸಂಗಮೇಶ್, ಆರ್.ವಿನಾಯಕ ಭಜಂತ್ರಿ, ಲಿಂಗಾನಂದ, ಮೈದೂರ್ ಮಲ್ಲಿಕಾರ್ಜುನ, ಬಂಡ್ರಿ ರಾಜಣ್ಣ, ಮರಿಯಪ್ಪ, ಕಡಕೊಳ್ಳಿ ಐ ಸಿದ್ದನಗೌಡ, ಜಯಲಕ್ಷ್ಮೀ ವೀರನಗೌಡ, ಜಾನಕಮ್ಮ, ಕಣಿವೆಹಳ್ಳಿ ಗಿರೀಶ ,ಶಿವರಾಜ, ಸುರೇಶ, ಶೃಂಗಾರತೋಟ ಕೋಟ್ಯಪ್ಪ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಎಂ.ವೀರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net