

ಬೆಂಗಳೂರು: ರಿಯಲ್ ಎಸ್ಟೇಟ್ ಪ್ರಾಪರ್ಟಿ ಎಕ್ಸ್‌ಪೋ-2023’ ಗೆ ಮಾಜಿ ಸಚಿವ ಹಾಗೂ ಶಾಸಕ ಎಂ.ಕೃಷ್ಣಪ್ಪ ಅವರು ಶುಕ್ರವಾರ ಮಧ್ಯಾಹ್ನ ೧೨.೩೦ ಕ್ಕೆ ಚಾಲನೆ ನೀಡಲಿದ್ದು, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿದೇರ್ಶಕ ಡಾ.ಆನಂದ ಸಂಕೇಶ್ವರ, ಚಲನಚಿತ್ರ ನಟ ವಿಕ್ಕಿ ವರುಣ್ ಮತ್ತು ನಟಿ ಧನ್ಯ ರಾಮ್‌ಕುಮಾರ್ ಸೇರಿ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ.
ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿರುವ ರಾಜ್ಯದ ನಂ.೧ ದಿನಪತ್ರಿಕೆ ವಿಜಯವಾಣಿ ಅ. ೬ರಿಂದ ೮ರವರೆಗೆ ನಗರದಲ್ಲಿ ಬೃಹತ್ ‘ರಿಯಲ್ ಎಸ್ಟೇಟ್ ಪ್ರಾಪರ್ಟಿ ಎಕ್ಸ್‌ಪೋ - ೨೦೨೩’ ಆಯೋಜಿಸಿದೆ. ನಾಗರಿಕರು ತಮ್ಮ ಕನಸಿನ ಮನೆ, ನಿವೇಶನ, ಅಪಾರ್ಟ್‌ಮೆಂಟ್, ಾರ್ಮ್‌ಹೌಸ್ ಖರೀದಿಸಲು ಇಂದೊಂದು ಸುವರ್ಣಾವಕಾಶವಾಗಿದೆ.
ವಿಜಯನಗರದ ಬಿಜಿಎಸ್ ಶಿಕ್ಷಣ ಸಂಸ್ಥೆ ಎದುರು ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಿಯಲ್ ಎಸ್ಟೇಟ್ ಎಕ್ಸ್‌ಪೋನಲ್ಲಿ ನೂರಾರು ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್‌ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಡ್, ಡಿಎಸ್ ಮ್ಯಾಕ್ಸ್, ಕೆಎನ್‌ಎಸ್ ಇನ್‌ರ್ಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಶರಣ್ಯಾ ಾರ್ಮ್ಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ನಿವೇಶನ, ಅಪಾರ್ಟ್‌ಮೆಂಟ್ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ. ಕೆನರಾ ಬ್ಯಾಂಕ್ ಹಣಕಾಸಿನ ನೆರವನ್ನು ಒದಗಿಸಲಿದೆ.
ಉಚಿತ ಪ್ರವೇಶ, ಪಾರ್ಕಿಂಗ್ ವ್ಯವಸ್ಥೆ
ಎಕ್ಸ್‌ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಸೇರಿ ಇತರೆ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾ, ಫಾರ್ಮ್ ಹೌಸ್ ಹಾಗೂ ಫಾರಂಪ್ಲಾಟ್ ಯೋಜನೆಗಳ ಮಾಹಿತಿ ಪಡೆಯಬಹುದು. ೩ ದಿನ ನಡೆಯುವ ಮೇಳದಲ್ಲಿ ಸಾವಿರಾರು ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕನಸು ನನಸಾಗಿಸಿಕೊಳ್ಳಿ
ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಸಿಲಿಕಾನ್‌ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ್ಲ್ಯಾಟ್ ಹಾಗೂ ಾರ್ಮ್‌ಹೌಸ್‌ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಇದಾಗಿದೆ. ಬಿಡಿಎ ಹಾಗೂ ಬಿಎಂಆರ್‌ಡಿಎ ಸೈಟ್‌ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಸಾರ್ವಜನಿಕರು ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಚಿನ್ನದ ನಾಣ್ಯ ಗೆಲ್ಲುವ ಅವಕಾಶ:
ಎಕ್ಸ್‌ಪೋಗೆ ಬರುವ ಗ್ರಾಹಕರಿಗೆ ಪ್ರತಿ ಎರಡು ಗಂಟೆಗೊಮ್ಮೆ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಗ್ರಾಹಕರು ಈ ಚಿನ್ನದಂಥಹ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ
ಸ್ಟಾಲ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ: ೭೨೦೪೨೮೧೪೭೭ ಸಂಪರ್ಕಿಸಬಹುದು.