ರಿಯಲ್ ಎಸ್ಟೇಟ್ ವ್ಯಕ್ತಿಗೆ ಬೆದರಿಕೆ, ಅಪರಿಹರಿಸಿ ಹಣ ವಸೂಲಿ

99991
Published on

ಚಿಕ್ಕಬಳ್ಳಾಪುರ: ರಿಯಲ್ ಎಸ್ಟೇಟ್ ವ್ಯವಹಾರಸ್ಥ ತೋಟದ ಮನೆಯ ಬಳಿಕ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ತಂಡವು ಬಂದೂಕು ತೋರಿಸಿ, ಅಪಹರಿಸಿದ್ದಲ್ಲದೇ 20 ಲಕ್ಷ ರೂಗಳನ್ನು ಪಡೆದುಕೊಂಡು ಪರಾರಿಯಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿಯ ಕೆ.ಆರ್.ನವೀನ್ (39) ಅಪಹರಣ, ಹಣ ವಸೂಲಿ ಮತ್ತು ಬೆದರಿಕೆಯನ್ನೊಡ್ಡಿರುವುದಕ್ಕೆ ಸಂಬಂಧಿಸಿದಂತೆ ನಂದಿ ಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

*ಪ್ರಕರಣದ ಹಿನ್ನೆಲೆ

ಬೆಳಿಗ್ಗೆ 7.30 ರ ವೇಳೆ ತೋಟದ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ 6 ಜನರು ಬಂದು ನವೀನ್‌ರನ್ನು ಹಿಡಿದುಕೊಂಡಿದ್ದಾರೆ. ತಲೆಗೆ ಗನ್ ತೋರಿಸಿ, ಅಲುಗಾಡಿದರೆ ಸುಟ್ಟು ಹಾಕುವುದಾಗಿ ಬೆದರಿಸಿದ್ದಾರೆ. ಕೊನೆಗೆ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿದ್ದು ವಾಹನದಲ್ಲಿದ್ದ ನಾಲ್ವರು ನಿಂದಿಸಿದ್ದಾರೆ. ಇದೇ ವೇಳೆ ನೀನು ಯಾರಿಗೋ ಹಣ ಕೊಡಬೇಕು, ಆದರೂ ಯಾಕೆ ಕೊಟ್ಟಿಲ್ಲ, ಅದನ್ನು ಈಗ ಕೊಟ್ಟು ಬಿಡು ಎಂದು ಹೇಳಿದ್ದಾರೆ. ಸ್ಥಳಕ್ಕೆ 50 ಲಕ್ಷ ಹಣ ತರಿಸಲು ಒತ್ತಡ ಹೇರಿ, ಥಳಿಸಿದ್ದಾರೆ. ಇದರಿಂದ ಭಯಗೊಂಡ ನವೀನ್ ಪರಿಚಿತರಿಂದ ಹಣವನ್ನು ತರಿಸಿಕೊಂಡು, ಕೊಟ್ಟ ಬಳಿಕ ಗುಂಪು ರಸ್ತೆಯ ಮಧ್ಯೆ ಬಿಟ್ಟು ಹೋಗಿದೆ. ಈ ವಿಷಯದ ಬಗ್ಗೆ ಏನಾದರೂ ಯಾರಿಗಾದರೂ ತಿಳಿಸಿದ್ದಲ್ಲಿ, ಪೊಲೀಸ್ ಠಾಣೆಗೆ ದೂರು ಕೊಟ್ಟಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಆರೋಪಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದ್ದು ಅವರನ್ನು ಪುನಃ ನೋಡಿದರೆ, ಗುರುತಿಸುವುದಾಗಿ ನವೀನ್ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net