ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಮುಂದಾಗಿ

govt
Published on

ಕೋಲಾರ: ಸರ್ಕಾರ ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಿದ್ದು, ಪ್ರತಿಯೊಬ್ಬರು ನೋಂದಣಿಯಾಗಿ ಗುರುತಿನ ಚೀಟಿ ಪಡೆದುಕೊಂಡು ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ವಿ.ಕೃಷ್ಣ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ 186ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 1 ಸಾವಿರ ಮಂದಿ ಛಾಯಾಗ್ರಾಹಕರಿದ್ದಾರೆ, ಪ್ರತಿ ತಿಂಗಳು ಛಾಯಾಗ್ರಾಹಕರು ಗ್ರಾಮೀಣ ಬ್ಯಾಂಕ್​ ಮೂಲಕ 1 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್​.ವರಲಕ್ಷಿ$್ಮ ಮಾತನಾಡಿ, ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಸರ್ಕಾರ ಗುರುತಿಸಿದೆ. 16 ವರ್ಷದಿಂದ 60 ವಯಸ್ಸಿನೊಳಗಿನ ಪ್ರತಿಯೊಬ್ಬರೂ ಸ್ಮಾರ್ಟ್​ ಕಾರ್ಡ್​ ಪಡೆದುಕೊಳ್ಳುವ ಮೂಲಕ ಅಪಘಾತ ವಿಮೆ, ಅಂತ್ಯಸಂಸ್ಕಾರ ನೆರವು ಇತ್ಯಾದಿ ಪಡೆದುಕೊಳ್ಳಬಹುದು. ಪ್ರಸ್ತುತ ಜಿಲ್ಲೆಯಲ್ಲಿ 130 ಮಂದಿ ನೋಂದಣಿಯಾಗಿದ್ದು, ಸ್ಮಾರ್ಟ್​ ಕಾರ್ಡ್​ ಜತೆಗೆ ಇ-&ಶ್ರಮ್​ ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಛಾಯಾಗ್ರಾಹಕರು ಬದಲಾಗುವ ಕಾಲಮಾನದ ಸವಾಲು ಎದುರಿಸಬೇಕಾದರೆ ಕ್ರಿಯಾಶೀಲರಾದರೆ ಭವಿಷ್ಯದ ಆತಂಕ ದೂರ ಮಾಡಬಹುದು ಎಂದರು.

ರಾಜ್ಯ ಛಾಯಾಗ್ರಾಹಕರ ಸಂಘದ ಖಜಾಂಚಿ ಕೆ.ಆರ್​.ಲವರಾಜ್​ ಮಾತನಾಡಿ, ರಾಜ್ಯಮಟ್ಟದ ಛಾಯಾಗ್ರಾಹಣ ಸ್ಪರ್ಧೆಯನ್ನು ಏರ್ಪಡಿಸಿ ದೇಣಿಗೆ ಸಂಗ್ರಹಿಸಿ ಕೋಲಾರ ಭವನಕ್ಕೆ ನೀಡಲು ಕ್ರಮವಹಿಸಲಾಗುವುದು ಎಂದು ಘೋಷಿಸಿದರು.

ಛಾಯಾಗ್ರಾಹಕರಾದ ಶ್ರೀಪತಿ, ಅಮರನಾಥ್​, ಶೇಖರ್​, ಗುಂಡಣ್ಣ ಮತ್ತು ನಜೀಬ್​ರಿಗೆ ಕೋಲಾರ ಛಾಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್​.ಗಣೇಶ್​, ಜಿಲ್ಲಾ ಸಂಘದ ಉಪಾಧ್ಯಕ್ಷ ಜಿ.ವೇಣುಗೋಪಾಲ್​, ಮಾಲೂರು ಸಂಘದ ಅಧ್ಯಕ್ಷ ವಿ.ರವಿ, ಕೋಲಾರ ಅಧ್ಯಕ್ಷ ಸ್ಪಂದನ ರಂಗನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net