ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟಕ್ಕೂ ಸಿದ್ಧ

9 mlv1 (1)
Published on

ಮಳವಳ್ಳಿ: ಸದನದಲ್ಲಿ ಹೋರಾಟ ಮಾಡಿಯಾದರೂ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ತಾಲೂಕಿನ ಹಂಗ್ರಾಪುರ ಬಳಿ ಮಳವಳ್ಳಿಯಿಂದ ತಿ.ನರಸೀಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಸ್ಪಂದಿಸದಿದ್ದರೆ ಜೆಡಿಎಸ್ ಶಾಸಕರು ಒಗ್ಗೂಡಿ ಸದನದಲ್ಲಿ ಹೋರಾಟ ಮಾಡಿಯಾದರೂ ಅನುದಾನ ಪಡೆಯುತ್ತೇವೆ ಎಂದರು.

ಕಿರುಗಾವಲು ಹೋಬಳಿಯ 43 ಹಳ್ಳಿಗಳಿಗೆ ಕಾವೇರಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕಾಮಗಾರಿ ಪ್ರಗತಿಯಲ್ಲಿದ್ದು, ಹಂತಹಂತವಾಗಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ತಾಲೂಕು ಘಟಕದ ಕಾರ್ಯಾಧ್ಯಕ್ಷ ಪುಟ್ಟುಬುದ್ದಿ, ಮುಖಂಡರಾದ ಬಸವಣ್ಣ, ಪ್ರಭುಸ್ವಾಮಿ, ರಾಜಣ್ಣ, ಚಂದ್ರಪ್ಪ, ಪ್ರಸಾದ್, ಗುರುಮೂರ್ತಿ ನಿಂಗೇಗೌಡ, ಶಿವಸ್ವಾಮಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net