

ಮೈಸೂರು: ಸಂಸದ ಪ್ರತಾಪ್ ಸಿಂಹ ಉದ್ದೇಶಪೂರ್ವಕವಾಗಿಯೇ ರೈಲಿಗೆ ಟಿಪ್ಪು ಅವರ ಹೆಸರನ್ನು ಬದಲಿಸಿದ್ದಾರೆ. ‘ಟಿಪ್ಪು ಧರ್ಮಾಂಧ ಹಾಗೂ ಮೈಸೂರಿಗೆ ಅವರ ಕೊಡುಗೆ ಅವರ ಕೊಡುಗೆ ಏನು’ ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ. ನಾನು ಟಿಪ್ಪು ಆಡಳಿತ, ಕೊಡುಗೆಗಳ ಬಗ್ಗೆ ಬರೆದಿರುವ ಹಲವು ಪುಸ್ತಕಗಳನ್ನು ಓದಿದ್ದೇನೆ. ಅವರು ಒಪ್ಪಿದರೆ ಈ ಸಂಬಂಧ ಪ್ರತಾಪ್ ಸಿಂಹ ಜತೆ ವಿಚಾರ ವಿನಿಮಯ ಮಾಡಲು ಸಿದ್ಧ ಇದ್ದೇನೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಸಂಸದ ಪ್ರತಾಪ್ ಸಿಂಹ ಟಿಪ್ಪು ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಂಡಿದ್ದಾರೆ. ನಾನು ಕೂಡ ಒಂದಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಾಪಸಿಂಹ ಒಪ್ಪಿಕೊಂಡು ಸಮಯ ತಿಳಿಸಿದರೆ ವಿಚಾರ ವಿನಿಮಯ ಮಾಡಿಕೊಳ್ಳೋಣ. ಆದರೆ, ಇದು ಸವಾಲಲ್ಲ ಎಂದು ಭಾನುವಾರ ನಗರದ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತ್ ಐಕ್ಯತಾಯಾತ್ರೆ ಬಗ್ಗೆ ಬಿಜೆಪಿ ನಾಯಕರು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಇಂತಹ ಯಾತ್ರೆಗಳನ್ನು ವಾಜಪೇಯಿ ಅವರು, ಅಡ್ವಾಣಿ ಅವರು ಮಾಡಿಲ್ಲವೇ ಎಂದರು. ಅಂತಾರಾಷ್ಟ್ರೀಯ ಹಸಿವಿನ ಸೂಚ್ಯಂಕವನ್ನು ನೋಡಿದರೆ 121ರಲ್ಲಿ 107ನೇ ಸ್ಥಾನ ನಮ್ಮದಾಗಿದೆ. ನಮ್ಮ ನೆರವರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ನಮಗಿಂತ ಮೇಲಿವೆ ಎಂದು ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮದರಸಗಳು ಮತ್ತು ಅಲ್ಲಿನ ಶೈಕ್ಷಣಿಕ ವ್ಯವಸ್ಥೆಗಳನು