ಓದು ತರಲಿದೆ ಬುದ್ಧಿಶಕ್ತಿ ವಿಕಸನ

MLK UDGATANE 23
Published on

ಮೊಳಕಾಲ್ಮೂರು: ಪ್ರಸ್ತುತ ಕಾಲಘಟ್ಟದಲ್ಲಿ ಬುದ್ಧಿಶಕ್ತಿ ವಿಕಸನಕ್ಕೆ ದಿನ ಪತ್ರಿಕೆ ಹಾಗೂ ಒಳ್ಳಯೆ ಕೃತಿಗಳನ್ನು ಓದುವ ಹವ್ಯಾಸ ಬೆಳಸಿಕೊಂಡರೆ ಬುದ್ಧಿಶಕ್ತಿ ವಿಕಸನಗೊಳ್ಳಲಿದೆ ಎಂದು ಚಿತ್ರದುರ್ಗ ಡಯಟ್ ಉಪನ್ಯಾಸಕ ಎನ್.ರಾಘವೇಂದ್ರ ಹೇಳಿದರು.

ತಾಲೂಕಿನ ಬಾಂಡ್ರಾವಿ ಸರ್ಕಾರಿ ಪ್ರೌಡ ಶಾಲೆಯಲ್ಲಿ ಬುಧವಾರ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕೆಕ್ಕೇ ಸೀಮಿತವಾಗದೆ ದಿನ ಪತ್ರಿಕೆ ಹಾಗೂ ಸಾಹಿತಿ ಹಾಗೂ ಸಮಾಜ ಸುಧಾರಕರ ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಜಗತ್ತನ್ನೇ ಗೆಲ್ಲಬಹುದು ಎಂದ ಅವರು, ಗ್ರಾಮೀಣ ಮಕ್ಕಳಿಗೆ ಗ್ರಂಥಾಲಯಕ್ಕೆ ಮುಕ್ತ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಡಯಟ್ ಹಿರಿಯ ಉಪನ್ಯಾಸಕಿ ವಿ.ಕನಕಮ್ಮ ಮಾತನಾಡಿ, ವಿದ್ಯೆ ಜೀವನದ ದಾರಿ ದೀಪಕ್ಕೆ ಅಡಿಗಲ್ಲಾದರೆ, ಪುಸ್ತಕಗಳು ಲೌಕಿಕ ಬದುಕನ್ನು ಕಟ್ಟಿಕೊಡಲಿವೆ ಎಂದು ಹೇಳಿದರು.

ಹಣ, ಆಸ್ತಿ ಸಂಪಾದಿಸಿದರೆ ಸಾಲದು ಸಮಾಜದಲ್ಲಿ ಉತ್ತಮ ನಾಗರಿಕತೆಯ ಮೌಲ್ಯ ಬೆಳೆಸಿಕೊಂಡರೆ ಜೀವನ ಸಾರ್ಥಕ ಆಗಲಿದೆ. ವಿದ್ಯಾರ್ಥಿಗಳು ನಿತ್ಯ ಬಿಡುವಿನ ವೇಳೆಯಲ್ಲಿ ದಿನ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.

ಬಿಇಒ ಕೆ.ತಿಪ್ಪೇಸ್ವಾಮಿ, ಇಸಿಒ ಓಂಕಾರಪ್ಪ, ಮುಖ್ಯಶಿಕ್ಷಕ ಶಂಕರ್ ಪಾಟೀಲ್, ಸಹ ಶಿಕ್ಷಕರಾದ ಯು.ಆರ್.ಬಸವರಾಜ್, ರಂಗಪ್ಪ, ಪ್ರತಾಪ್‌ಕುಮಾರ, ರಾಮಾಂಜಿನೇಯ, ಶರತ್‌ಕುಮಾರ್, ಸಿಬ್ಬಂದಿ ಬಾಂಡ್ರಾವಮ್ಮ, ರತ್ನಮ್ಮ, ಮಾರಕ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net