ಓದುವ ಹವ್ಯಾಸ ಅತೀ ಅವಶ್ಯಕ

hawkers sanman
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ತಾಂತ್ರಿಕತೆ ಬೆಳೆದಂತೆ ಡಿಜಿಟಲ್ ಮಾಯಾಲೋಕಕ್ಕೆ ಮರುಳಾಗುತ್ತಿರುವ ಯುವ ಸಮೂಹ ಓದಿನಿಂದ ವಿಮುಖರಾಗಿದ್ದಾರೆ. ಇದರಿಂದ ಯುವ ಜನಾಂಗದಲ್ಲಿ ಜ್ಞಾನದ ಸಂಪತ್ತು ಕುಂಟಿತವಾಗುತ್ತಿದೆ. ಇಂದಿನ ಪೀಳಿಗೆ ಸಾಮಾಜಿಕ ಜಾಲತಾಣದಿಂದ ಹೊರಬಂದು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಓದುವ ಹವ್ಯಾಸ ಅತೀ ಅವಶ್ಯವಾಗಿದೆ ಎಂದು ಉದ್ಯಮಿ ರಾಜು ಶೀಲವಂತರ ಹೇಳಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಸಂಗೀತಾ ಇಜಾರದ ಮಾತನಾಡಿ, ಪತ್ರಿಕಾ ವಿತರಕರ ಕಾಯಕ ಶ್ರೇಷ್ಠವಾದದ್ದು. ಮಳೆ, ಬಿಸಿಲು, ಅಲ್ಲದೇ ಎಂತಹ ಸಮಯದಲ್ಲೂ ಪ್ರಾತಃ ಕಾಲದಲ್ಲಿ ಜನರಿಗೆ ಪತ್ರಿಕೆ ಮುಟ್ಟಿಸುವುದು ಸುಲಭವಲ್ಲ. ಪತ್ರಿಕೆ ಮತ್ತು ಜನರ ಮಧ್ಯೆ ಪತ್ರಿಕಾ ವಿತರಕರು ಕೊಂಡಿಯಾಗಿದ್ದಾರೆ ಎಂದು ಹೇಳಿದರು.

ಪತ್ರಿಕೆ ವಿತರಕರಾದ ರಮೇಶ ಜಿತೂರಿ, ಅರುಣ ತೋಡಕರ ಅವರನ್ನು ಗೌರವಿಸಲಾಯಿತು. ನೀಲಕಂಠ ಸ್ವಾಮಿ ಹಿರೇಮಠ, ಸವಿತಾ ಚಂದನಮಟ್ಟಿ, ರತ್ನಾ ಬಸಾಪುರ, ಅಶ್ವಿನಿ ತೆಗ್ಗಿಹಳ್ಳಿ, ಗಾಯತ್ರಿ ನೆಲ್ಲಿಕೊಪ್ಪ, ಸಂಗೀತಾ ದೇವದಾಸ ಇದ್ದರು. ಚಂದ್ರಶೇಖರ ಗಾಣಿಗೇರ ಸ್ವಾಗತಿಸಿದರು. ರೂಪಾ ಅಂಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net