ಓದುವುದರಿಂದ ಕ್ರಿಯಾಶೀಲತೆ ಹೆಚ್ಚಳ

Untitled design (2)
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಲಾವಣ್ಯ ಶಿವಪ್ಪ , ಶ್ರೀದೇವಿ ನಿಂಗಪ್ಪ ಬಾದರ್ಲಿ ಮತ್ತು ಅಕ್ಷತಾ ನರಸಪ್ಪರನ್ನು ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಉಪನ್ಯಾಸಕರಾದ ವಿರುಪನಗೌಡ, ಜಗದೀಶ ಓತೂರು, ಪ್ರಾಚಾರ್ಯ ಮುರುಡಯ್ಯಸ್ವಾಮಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಮಾಳಪ್ಪ ಇದ್ದರು.
Published on

ಸಿಂಧನೂರು: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಾಗ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಜಗದೀಶ ಓತೂರು ಹೇಳಿದರು.


ಜಾಲಿಹಾಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪ್ರಸ್ತುತ ದಿನಮಾನಗಳಲ್ಲಿ ಕೆಟ್ಟ ಹವ್ಯಾಸಕ್ಕೆ ಬಲಿಯಾಗುತ್ತಿದ್ದಾರೆ. ಪುಸ್ತಕಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅಸ್ತ್ರಗಳಾಗಿದ್ದು, ಪುಸ್ತಕಗಳಿಂದ ಜ್ಞಾನ ಗಳಿಸಿಕೊಳ್ಳಬೇಕು. ಓದುವುದರಿಂದ ಮಾನಸಿಕ, ದೈಹಿಕ ಹಾಗೂ ಸಾಂಸ್ಕೃತಿಕ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ತಿಳಿಸಿದರು.


ನಿವೃತ್ತ ಪ್ರಾಚಾರ್ಯ ವಿರುಪನಗೌಡ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಸಾಮಾಜಿಕ ಮಾಧ್ಯಮಗಳ ಕಡೆಗೆ ಆಕರ್ಷಿತರಾಗದೆ ಗುರುಗಳು ಹೇಳಿದ ಪಾಠದ ಕಡೆಗೆ ಗಮನ ಕೊಡುವ ಮುಖಾಂತರ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.

ಪ್ರಾಚಾರ್ಯ ಮುರುಡಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಾಳಪ್ಪ, ಉಪನ್ಯಾಸಕರಾದ ರೆಡ್ಡಪ್ಪ ಹಳ್ಳಿ, ವಿಜಯಕುಮಾರ, ಕಾಳಿಂಗರೆಡ್ಡಿ, ಚಂದ್ರಶೇಖರ ವಲ್ಕಂದಿನ್ನಿ, ವೆಂಕಟೇಶ ಬುಕ್ಕನಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net