ವಿವೇಕ ಜಾಗೃತ ಬಳಗದಿಂದ ಓದುಗರ ಸಮಾವೇಶ

odugara samavesha
Published on

ಮಡಿಕೇರಿ: ಡಿವೈನ್ ಪಾರ್ಕ್ ಸಂಸ್ಥೆಯ ಅಂಗಸಂಸ್ಥೆಯಾದ ಮೂರ್ನಾಡು ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಸಂಪದ ಓದುಗರ ಸಮಾವೇಶ ನಡೆಯಿತು.


ಸಿದ್ದಾಪುರದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಡಿವೈನ್ ಪಾರ್ಕ್‌ನ ಅಧಿಕಾರಿ ಗುರುಪ್ರಸಾದ್ ಓದುಗರ ಸಮಾವೇಶದ ಕುರಿತು ವಿವರಿಸಿದರು.


ವಿವೇಕವನ್ನೇ ಸಂಪದವಾಗಿಸಿಕೊಂಡಿರುವ ಪುಸ್ತಕ ಭಗವಂತನಿಗೆ ಮೊದಲ ಆದ್ಯತೆ ನೀಡಿದೆ. ಆದರೆ, ಬದುಕು ಜಟಕಾಬಂಡಿಯಾಗದೆ, ಭಗವಂತನ ಕೃಪಾಬಂಡಿಯಾಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮೂರ್ನಾಡು ವಿವೇಕ ಜಾಗೃತ ಬಗಳಗದ ಅಧ್ಯಕ್ಷೆ ದಿವ್ಯ ತೇಜಕುಮಾರ್, ಉಪಾಧ್ಯಕ್ಷ ಯಶವಂತ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಶೃತಿ ಸ್ವಾಗತಿಸಿದರೆ, ಬಿ.ಜಿ.ಸೌಮ್ಯ ನಿರೂಪಿಸಿ, ಸಿ.ಜಿ.ಲೀಲಾವತಿ ವಂದಿಸಿದರು. ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net