ಡಿವೈನ್ ಪಾರ್ಕ್‌ನಿಂದ ಉತ್ತಮ ಸಂಸ್ಕಾರ : ಬಪ್ಪನಾಡು ರಾಧಾ ಭಟ್ ಅಭಿಪ್ರಾಯ

New Project (39)
Published on

ಮೂಲ್ಕಿ: ವ್ಯಕ್ತಿತ್ವ ವಿಕಸನ, ರಾಷ್ಟ್ರೋದ್ಧಾರದ ಉನ್ನತ ತತ್ವಗಳಿಗೆ ಬದ್ಧರಾಗಿರಲು ಮನಸ್ಸು, ಹೃದಯಕ್ಕೆ ಉತ್ತಮ ಸಂಸ್ಕಾರವನ್ನು ಡಿವೈನ್ ಪಾರ್ಕ್ ನೀಡುತ್ತಿರುವುದು ಸ್ತುತ್ಯರ್ಹ ಎಂದು ಹಿರಿಯ ವಾಗ್ಮಿ ಬಪ್ಪನಾಡು ರಾಧಾ ಭಟ್ ಹೇಳಿದರು.

ಮೂಲ್ಕಿ ವಿವೇಕ ಜಾಗೃತ ಬಳಗದ ವತಿಯಿಂದ ಒಡೆಯರಬೆಟ್ಟು ಸ್ವಾಮಿ ವಿವೇಕಾನಂದ ಧ್ಯಾನ ಮಂದಿರದಲ್ಲಿ ಭಾನುವಾರ ನಡೆದ ಸಾಧಕ ಜನರ ಸಂಗಮ, ಓದುಗರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಂತನಕಾರರಾಗಿ ಡಿವೈನ್ ಪಾರ್ಕ್ ಅಧಿಕಾರಿ ಪ್ರೇಮ ಪ್ರಭಾಕರ್ ಮಾತನಾಡಿ, ಜಾಗತೀಕರಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಇಂದಿನ ದಿನಗಳಲ್ಲಿ ಸಮಗ್ರವಾಗಿ ಮನುಷ್ಯನ ಬದುಕು ಅರ್ಥಹೀನ ಸ್ಥಿತಿಗೆ ಬಂದು ಬಿಟ್ಟಿದೆ. ಆತ್ಮ ಸಂಯಮ, ಸದಾಚಾರ, ಅಧ್ಯಾತ್ಮದ ಅನುಷ್ಠಾನ, ವಿವೇಕದ ಸಂಪತ್ತಿನಿಂದ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಸಾಧ್ಯ ಎಂದರು.

ಬೈಕಂಪಾಡಿ ಸಂಚಾರ ಉತ್ತರ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ಗೀತಾ ಸತೀಶ್ ಮಾತನಾಡಿದರು. ಪದವಿ ಶಿಕ್ಷಣ ಪೂರೈಸುತ್ತಿರುವ ಎಸ್‌ಕೋಡಿಯ ಆರ್ಥಿಕತೆಯ ಸಮಸ್ಯೆ ಇರುವ ಕುಮಾರಿ ಅಮೃತ ರಾವ್ ಅವರಿಗೆ 16 ಸಾವಿರ ರೂ. ಮೊತ್ತದ ಶೈಕ್ಷಣಿಕ ಸಹಕಾರ ನೀಡಲಾಯಿತು.

ಬಳಗದ ಅಧ್ಯಕ್ಷ ಶ್ರೀನಿವಾಸ ಶ್ರೀಯಾನ್, ಧ್ಯಾನ ಮಂದಿರದ ರಮೇಶ್ ಬಂಗೇರ ಉಪಸ್ಥಿತರಿದ್ದರು. ವಿಮಲ ಭಟ್ ನಿರ್ವಹಿಸಿದರು. ಲೋಲಾಕ್ಷಿ ಸ್ವಾಗತಿಸಿದರು. ಸುಗಂಧಿ ಕೇಶವ ಪ್ರಸ್ತಾವಿಸಿದರು. ಲಲಿತ ಭಾಸ್ಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net